ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಗರಿಯ ಪಕ್ಷಿಗಳು- ಮಾಯಾವತಿ

ಕಾಂಗ್ರೆಸ್ ಪಕ್ಷದ ನ್ಯೂನತ್ತಮ ಆಯ್ ಯೋಜನೆ ಭರವಸೆ ಬಗ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಕಿಡಿ ಕಾರಿದ್ದಾರೆ.

Last Updated : Mar 27, 2019, 03:52 PM IST
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಗರಿಯ ಪಕ್ಷಿಗಳು- ಮಾಯಾವತಿ title=

ನವದೆಹಲಿ: ಕಾಂಗ್ರೆಸ್ ಪಕ್ಷದ ನ್ಯೂನತ್ತಮ ಆಯ್ ಯೋಜನೆ ಭರವಸೆ ಬಗ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಕಿಡಿ ಕಾರಿದ್ದಾರೆ.

ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ಈ ಘೋಷಣೆ ಬಗ್ಗೆ ವ್ಯಂಗ್ಯವಾಡುತ್ತಾ ಇದು ಕಾಂಗ್ರೆಸ್ ಪಕ್ಷದ ಗರಿಬಿ ಹಟಾವೋ 2.0 ಎಂದು ವಾಖ್ಯಾನಿಸಿತ್ತು.ಈ ಬೆನ್ನಲ್ಲೇ ಈಗ ಮಾಯಾವತಿ ಟ್ವೀಟ್ ಮಾಡಿ ಸಹಮತ ವ್ಯಕ್ತಪಡಿಸಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತೆ ಚುನಾವಣಾ ಭರವಸೆ ನೀಡುತ್ತಿರುವುದನ್ನು ಪ್ರಸ್ತಾಪಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಗರಿಯ ಎರಡು ಪಕ್ಷಗಳು, ರೈತರು ಕಾರ್ಮಿಕರು,ಬಡವರ ಹಿತಾಸಕ್ತಿಗಳಿಗೆ ದ್ರೋಹ ಮಾಡುತ್ತಿವೆ ಎಂದು ಮಾಯಾವತಿ ಕಿಡಿ ಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಈಗ ಮಾಯಾವತಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಜಾತಿ ಲೆಕ್ಕಾಚಾರದ ಮೇಲೆ ಗೆಲುವಿನ ಭರವಸೆಯನ್ನು ಅವರು ಹೊಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಜೊತೆ ಯಾವುದೇ ರೀತಿಯ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಮಾಯಾವತಿ ಕಾಂಗ್ರೆಸ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

ಇದೇ ಎಪ್ರಿಲ್ 11 ರಿಂದ ಮೇ 19 ರವರಗೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಉತ್ತರ ಪ್ರದೇಶದಲ್ಲಿ ಎಲ್ಲಾ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ.ಮೇ 23 ರಂದು ಅಂತಿಮ ಫಲಿತಾಂಶ ಹೊರ ಬಿಳಲಿದೆ.

 

Trending News