ಮಮತಾ ಬ್ಯಾನರ್ಜೀ ಜೀವನ ಚರಿತ್ರೆ ಕುರಿತ ಭಗಿನಿ ಚಿತ್ರಕ್ಕೆ ತಡೆಯಾಜ್ಞೆ ಕೋರಿ ಬಿಜೆಪಿ ದೂರು

ಮಮತಾ ಬ್ಯಾನರ್ಜಿಯವರ ಜೀವನ ಚರಿತ್ರೆಯನ್ನು ಆಧರಿಸಿರುವ ಭಗಿನಿಗೆ ತಡೆಯಾಜ್ಞೆ ನೀಡುವಂತೆ ಬಿಜೆಪಿ ಈಗ ಚುನಾವಣಾ ಆಯೋಗಕ್ಕೆ ಬುಧವಾರದಂದು ಪತ್ರ ಬರೆದಿದೆ.

Last Updated : Apr 19, 2019, 05:33 PM IST
ಮಮತಾ ಬ್ಯಾನರ್ಜೀ ಜೀವನ ಚರಿತ್ರೆ ಕುರಿತ ಭಗಿನಿ ಚಿತ್ರಕ್ಕೆ ತಡೆಯಾಜ್ಞೆ ಕೋರಿ ಬಿಜೆಪಿ ದೂರು title=

ನವದೆಹಲಿ: ಮಮತಾ ಬ್ಯಾನರ್ಜಿಯವರ ಜೀವನ ಚರಿತ್ರೆಯನ್ನು ಆಧರಿಸಿರುವ ಭಗಿನಿಗೆ ತಡೆಯಾಜ್ಞೆ ನೀಡುವಂತೆ ಬಿಜೆಪಿ ಈಗ ಚುನಾವಣಾ ಆಯೋಗಕ್ಕೆ ಬುಧವಾರದಂದು ಪತ್ರ ಬರೆದಿದೆ.

ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಈ ಚಿತ್ರ ಬಿಡುಗಡೆ ಯಾಗುವ ಮೊದಲು ನರೇಂದ್ರ ಮೋದಿ ಕುರಿತ  ಚಲನಚಿತ್ರದ ಹಾಗೆ ಇದನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ ಪತ್ರದಲ್ಲಿ ತಿಳಿಸಿದ್ದಾರೆ.

ಭಗಿನಿ ಎನ್ನುವ ಈ ಬೆಂಗಾಲಿ ಚಿತ್ರವೂ ಇದೇ ಮೇ 3 ರಂದು ಬಿಡುಗಡೆಯಗುತ್ತಿದ್ದು.ಈ ಚಿತ್ರವೂ ಪ್ರಮುಖವಾಗಿ ಮಮತಾ ಬ್ಯಾನರ್ಜೀಯವರ ಜೀವನ ಹೋರಾಟದಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಲಾಗಿದೆ.ಈಗ ಚಿತ್ರದ ಬಿಡುಗಡೆ ಸಮಯದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಚಿತ್ರದ ನಿರ್ಮಾಪಕದ ಜೀ ನ್ಯೂಸ್ ಗೆ ಪ್ರತಿಕ್ರಿಯಿಸುತ್ತಾ "ನಾವು 2016 ರಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಿಸಿದ್ದೇವು ಆದರೆ . ಆದರೆ ಕೆಲವು ಎಡಿಟಿಂಗ್  ಮತ್ತು ಗ್ರಾಫಿಕ್ಸ್ ಮರು ರೂಪಿಸಬೇಕಾಗಿತ್ತು, ಹಾಗಾಗಿ ಇದು ಸಮಯ ಹಿಡಿಯಿತು. ಆದ್ದರಿಂದ ಚಿತ್ರದ ಬಿಡುಗಡೆ ವಿಳಂಬವಾಯಿತು.ಅಂತಿಮವಾಗಿ ನಾವು ಅದನ್ನು ಮೇ 3 ರಂದು ಬಿಡುಗಡೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.

Trending News