ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಂದಿನ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಲಬೆರಕೆ ಸರ್ಕಾರ ಎಂದು ಕರೆದ ಅವರು ಪ್ರತಿಪಕ್ಷಗಳನ್ನು ಮೌನಗೊಳಿಸಲು ನೋಟು ಅಮಾನ್ಯೀಕರಣದಂತಹ ದೋಷಪೂರಿತ ನಿರ್ಧಾರಗಳನ್ನು ಮತ್ತು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : RRR ಮೇಕಿಂಗ್ ವಿಡಿಯೋ: ಸೆಟ್ನಲ್ಲಿ ತೆಗೆದ ಸೀನ್‌ಗೆ ಇಷ್ಟೊಂದು ಗ್ರಾಫಿಕ್ಸ್!?
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಕಲಬೆರಕೆಯಾಗಿದೆ. ಅವರು ನೋಟು ಅಮಾನ್ಯೀಕರಣದಂತಹ ವಿನಾಶಕಾರಿ ನಿರ್ಧಾರಗಳ ಮೂಲಕ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ.ಇದು ದೊಡ್ಡ ಹಗರಣವಾಗಿದೆ," ಎಂದು ಸಿಎಂ ಮಮತಾ ಬ್ಯಾನರ್ಜೀ ಪುರುಲಿಯಾ ಜಿಲ್ಲೆಯಲ್ಲಿ ಟಿಎಂಸಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಹೇಳಿದರು.
Remember BJP Government, despite how much you try in 2024, it (victory) will not happen. No entry means you can't enter. From now on, people are saying '2024 no entry for BJP': West Bengal CM Mamata Banerjee in Purulia
(File photo) pic.twitter.com/7dkGFiqz03
— ANI (@ANI) May 31, 2022
ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ'
ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸಲು ಬಂಗಾಳಕ್ಕೆ ಕೇಂದ್ರದ ಬಾಕಿಯು ದೊಡ್ಡ ತಡೆಗೋಡೆಯಾಗಿರುವುದರಿಂದ, ಬ್ಲಾಕ್ ಮಟ್ಟದ ಆಂದೋಲನದ ಅವಶ್ಯಕತೆಯಿದೆ, ಅಲ್ಲಿ ಸಾಮಾನ್ಯ ಜನರು ಕೇಂದ್ರ ಬಾಕಿಗಳ ತೆರವು ಖಚಿತಪಡಿಸಿಕೊಳ್ಳಲು ಸ್ಥಳೀಯ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಾರೆ ಎಂದು ಬ್ಯಾನರ್ಜಿ ಹೇಳಿದರು.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಪ್ರವೇಶವಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅದು ಹೋಗಬೇಕು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲ" ಎಂದು ಅವರು ಹೇಳಿದರು. ಇದೆ ವೇಳೆ ಜನರು ಕೇಂದ್ರದ ಜನವಿರೋಧಿ ಸರಕಾರದಿಂದ ದೇಶದ ನಾಗರಿಕರು ಬೇಸತ್ತಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.