ಈ ಕಾರಣಗಳಿಂದಾಗಿ ಡಿಜಿಟಲ್ ಪ್ರಿಂಟ್ ನೊಂದಿಗೆ ಹೊಸ ಸಮವಸ್ತ್ರ ಪಡೆಯಲಿರುವ ಸೇನೆ

ಹಲವು ದೇಶಗಳ ಸೇನಾ ಸಮವಸ್ತ್ರಗಳ ಬಗ್ಗೆ ವ್ಯಾಪಕ ಚರ್ಚೆ ಮತ್ತು ವಿಶ್ಲೇಷಣೆಯ ನಂತರ ಈ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ. ಹೊಸ ಸಮವಸ್ತ್ರವು ಹೆಚ್ಚು ಬಾಳಿಕೆ ಬರುವುದರ ಜೊತೆಗೆ ಬೇಸಿಗೆ ಮತ್ತು ಚಳಿಗಾಲ ಹೀಗೆ ಎಲ್ಲ ಋತುಗಳಲ್ಲಿಯೂ ಆರಾಮದಾಯಕವಾಗಿರುತ್ತದೆ ಎನ್ನಲಾಗಿದೆ.

Written by - Ranjitha R K | Last Updated : Dec 3, 2021, 07:22 AM IST
  • ಮುಂದಿನ ವರ್ಷದ ವೇಳೆಗೆ ಸೇನೆಗೆ ಹೊಸ ಸಮವಸ್ತ್ರ
  • ಬದಲಾಗಲಿದೆ ಯುದ್ಧ ಸಮವಸ್ತ್ರವನ್ನು
  • ಸಮವಸ್ತ್ರ ಮೊದಲಿಗಿಂತ ಹೆಚ್ಚು ಆರಾಮದಾಯಕ
ಈ ಕಾರಣಗಳಿಂದಾಗಿ ಡಿಜಿಟಲ್ ಪ್ರಿಂಟ್ ನೊಂದಿಗೆ ಹೊಸ ಸಮವಸ್ತ್ರ ಪಡೆಯಲಿರುವ ಸೇನೆ  title=
ಮುಂದಿನ ವರ್ಷದ ವೇಳೆಗೆ ಸೇನೆಗೆ ಹೊಸ ಸಮವಸ್ತ್ರ (file photo)

ನವದೆಹಲಿ : ಮುಂದಿನ ವರ್ಷದಿಂದ ತನ್ನ ಸಿಬ್ಬಂದಿಗೆ ಹಗುರವಾದ ಮತ್ತು ಹೆಚ್ಚು ಹವಾಮಾನ ಸ್ನೇಹಿ ಸಮವಸ್ತ್ರವನ್ನು (Uniform) ಪರಿಚಯಿಸಲು ಸೇನೆಯು (Indian Army) ಸಿದ್ಧವಾಗಿದೆ. ಹೊಸ ಸಮವಸ್ತ್ರವನ್ನು (Army New Uniform) ಯುದ್ಧದ ಸಮಯದಲ್ಲಿ ಧರಿಸಬಹುದಾಗಿದ್ದು,  ಜನವರಿ 15 ರಂದು ನಡೆಯಲಿರುವ ಸೇನಾ ದಿನದ ಪರೇಡ್‌ನಲ್ಲಿ  ಇದನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. 

ಆರಾಮದಾಯಕವಾಗಿರಲಿದೆ ಹೊಸ ಸಮವಸ್ತ್ರ : 
ಹಲವು ದೇಶಗಳ ಸೇನಾ ಸಮವಸ್ತ್ರಗಳ ಬಗ್ಗೆ ವ್ಯಾಪಕ ಚರ್ಚೆ ಮತ್ತು ವಿಶ್ಲೇಷಣೆಯ ನಂತರ ಈ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ. ಹೊಸ ಸಮವಸ್ತ್ರವು (Army New Uniform)  ಹೆಚ್ಚು ಬಾಳಿಕೆ ಬರುವುದರ ಜೊತೆಗೆ ಬೇಸಿಗೆ (Summer) ಮತ್ತು ಚಳಿಗಾಲ (winter) ಹೀಗೆ ಎಲ್ಲ ಋತುಗಳಲ್ಲಿಯೂ ಆರಾಮದಾಯಕವಾಗಿರುತ್ತದೆ ಎನ್ನಲಾಗಿದೆ. ಸೇನಾ ಪಡೆಗಳ ನಿಯೋಜನೆಯ ಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಸಮವಸ್ತ್ರವು ಯುಎಸ್ ಆರ್ಮಿ (US army)  ಸಿಬ್ಬಂದಿಯಂತೆಯೇ ಡಿಜಿಟಲ್ ಮಾದರಿಯದ್ದಾಗಿರುತ್ತದೆ. ನೌಕಾಪಡೆಯು (Indian Navy) ಕಳೆದ ವರ್ಷ ಹೊಸ ಸಮವಸ್ತ್ರವನ್ನು ಪರಿಚಯಿಸಿತ್ತು.

ಇದನ್ನೂ ಓದಿ : "ನಿಮಗೆ 24 ಗಂಟೆಗಳನ್ನು ನೀಡುತ್ತಿದ್ದೇವೆ": ದೆಹಲಿ ಮಾಲಿನ್ಯದ ಕುರಿತು ಸರ್ಕಾರಕ್ಕೆ ಸುಪ್ರೀಂ ಕಠಿಣ ಎಚ್ಚರಿಕೆ

ಸಮವಸ್ತ್ರವನ್ನು ಹೆಚ್ಚು ಆರಾಮದಾಯಕ ಮತ್ತು ಸ್ಮಾರ್ಟ್ ಮಾಡಲು ಸೇನಾ ಪ್ರಧಾನ ಕಚೇರಿಯಿಂದ ಹಿಡಿದು ದೂರದ ಪ್ರದೇಶಗಳಲ್ಲಿ ನಿಯೋಜಿಸಲಾದ  ಪಡೆಗಳಿಂದಲೂ ಸಲಹೆಗಳನ್ನು ಕೇಳಲಾಗಿತ್ತು. ಇದಾದ ನಂತರ ವಿಶ್ವದ ವಿವಿಧ ಸೇನೆಗಳ ಸಮವಸ್ತ್ರಗಳನ್ನು ಪರೀಕ್ಷಿಸಲಾಯಿತು. ಹೊಸ ಯುಗದ ಬದಲಾವಣೆಗಳನ್ನು ಪರಿಗಣಿಸಿ, ಬದಲಾಗುತ್ತಿರುವ ಯುದ್ಧದ ಅಗತ್ಯತೆಗಳಿಗೆ ತಕ್ಕಂತೆ ಈ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.  

ಈಗಾಗಲೇ 3 ಬಾರಿ ಸಮವಸ್ತ್ರದಲ್ಲಿ ಬದಲಾವಣೆ : 
ಭಾರತೀಯ ಸೇನೆಯ (Indian army) ಸಮವಸ್ತ್ರದಲ್ಲಿ ಇದು ನಾಲ್ಕನೇ ಪ್ರಮುಖ ಬದಲಾವಣೆಯಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಅದನ್ನು ಪಾಕಿಸ್ತಾನದ (Pakistan) ಸೇನೆಯ ಸಮವಸ್ತ್ರದಿಂದ ಪ್ರತ್ಯೇಕಿಸಲು ಖಾಕಿಯಿಂದ ಆಲಿವ್ ಹಸಿರು ಬಣ್ಣಕ್ಕೆ ಬದಲಾಯಿಸಲಾಯಿತು. ಪಾಕಿಸ್ತಾನಿ ಸೇನೆ ಈಗಲೂ ಖಾಕಿ ಸಮವಸ್ತ್ರವನ್ನೇ ಬಳಸುತ್ತದೆ. ಎರಡನೆಯದಾಗಿ, 1980 ರಲ್ಲಿ, ಬ್ಯಾಟಲ್ ಆಯಾಸ ಅಂದರೆ ಕಾರ್ಯಾಚರಣೆಯ ಸಮಯದಲ್ಲಿ ಧರಿಸುವ ಸಮವಸ್ತ್ರವನ್ನು ಹತ್ತಿಯಿಂದ ಡಿDisruptive Pattern (DP) Battle Dressಗೆ ಬದಲಾಯಿಸಲಾಯಿತು.

ಇದನ್ನೂ ಓದಿ :  ಇನ್ಮುಂದೆ ಬೇಕಿಲ್ಲ ಆ್ಯಪ್​... WhatsApp ಮೂಲಕ Uberನಲ್ಲಿ ರೈಡ್ ಬುಕ್ ಮಾಡಲು ಹೀಗೆ ಮಾಡಿ!

ಸೇನೆಯು ಐದು ಬಗೆಯ ಸಮವಸ್ತ್ರಗಳನ್ನು ಧರಿಸುತ್ತದೆ :
ಭಾರತೀಯ ಸೇನೆಯಲ್ಲಿ ಐದು ರೀತಿಯ ಸಮವಸ್ತ್ರಗಳನ್ನು ಧರಿಸಲಾಗುತ್ತದೆ. ಮೊದಲನೆಯದ್ದು ಸೈನ್ಯದ ಅತ್ಯಂತ ಸಾಮಾನ್ಯವಾಗಿ ಧರಿಸಾಗಿರುವ ಆಲಿವ್ ಬಣ್ಣದ ಪ್ಯಾಂಟ್ ಮತ್ತು ಶರ್ಟ್. ಚಳಿಗಾಲದಲ್ಲಿ, ಕಪ್ಪು ಟೈ ಮತ್ತು ಆಲಿವ್ ಹಸಿರು ಪ್ಯಾಂಟ್ ಮತ್ತು ಬ್ಲೇಜರ್ ಹೊಂದಿರುವ ಪೀಚ್ ಬಣ್ಣದ ಶರ್ಟ್ ಧರಿಸಲಾಗುತ್ತದೆ. ಇದಲ್ಲದೆ, ಚಳಿಗಾಲದಲ್ಲಿ ಆಲಿವ್ ಹಸಿರು ಅಂಗೋರಾ ಶರ್ಟ್ ಅನ್ನು ಸಹ ಧರಿಸಲಾಗುತ್ತದೆ. ಬ್ಲೂ ಪೆಟ್ರೋಲ್ ಒಂದುಸೇರೆಮೊನಿಯಲ್ ಉಡುಗೆಯಾಗಿದ್ದು, ಇದರಲ್ಲಿ ಕೋಟ್‌ನ ಭುಜದ ಮೇಲೆ ಶ್ರೇಣಿಗಳನ್ನು ಕಸೂತಿ ಮಾಡಲಾಗುತ್ತದೆ. 6A ಒಂದು ಮೆಸ್ ಅಥವಾ ಡಿನ್ನರ್ ಸಮವಸ್ತ್ರವಾಗಿದ್ದು, ಇದರಲ್ಲಿ ಪ್ಯಾಂಟ್ ಅನ್ನು ಕಪ್ಪು ಕೋಟ್‌ನೊಂದಿಗೆ ಧರಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News