ಎಐಎಡಿಎಂಕೆ ಶಾಸಕ ಕಂಗರಾಜ್ ವಿಧಿವಶ

ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಕಂಗರಾಜ್.

Last Updated : Mar 21, 2019, 02:58 PM IST
ಎಐಎಡಿಎಂಕೆ ಶಾಸಕ ಕಂಗರಾಜ್ ವಿಧಿವಶ title=
Pic Courtesy: Social media

ಕೊಯಮತ್ತೂರು: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಶಾಸಕ ಕಂಗರಾಜ್ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. 64 ವರ್ಷದ ಕಂಗರಾಜ್ ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. 

ಜಿಲ್ಲೆಯ ಸುಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕಂಗರಾಜ್ ಅವರಿಗೆ ಇಂದು ಬೆಳಿಗ್ಗೆ ದಿನ ಪತ್ರಿಕೆ ಓದುವ ವೇಳೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ನಿವಾಸದ ಬಳಿಯಿರುವ ವೈದ್ಯರು ಪರಿಶೀಲಿಸಿದರು. ಅಷ್ಟರಲ್ಲಿ ಕಂಗರಾಜ್  ಮೃತಪಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. 

ಕಂಗರಾಜ್ ಅವರ ಪಾರ್ಥೀವ ಶರೀರವನ್ನು ಸುಲ್ತಾನ್ ಪೇಟ್ ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು,  ಇಂದು ಸಂಜೆ ಅಥವಾ ನಾಳೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಕೊಯಮತ್ತೂರು ಜಿಲ್ಲೆಯ ಪಂಚಾಯತ್ ಅಧ್ಯಕ್ಷರಾಗಿದ್ದ ಕಂಗರಾಜ್ 2016 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸುಲೂರ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಮನೋಹರನ್ ಅವರನ್ನು 35,000 ಮತಗಳ ಅಂತರದಿಂದ ಸೋಲಿಸಿದರು.  
 

Trending News