ವ್ಯಭಿಚಾರ ಕಾನೂನು ಅಸಂವಿಧಾನಿಕ,ಸುಪ್ರೀಂ ತೀರ್ಪು: ಸೆಕ್ಷನ್ 497 ಐಪಿಸಿ ಹೇಳುವುದೇನು?

 ಗುರುವಾರದಂದು ಐಪಿಸಿ ಸೆಕ್ಷನ್ 497 ನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಆ ಮೂಲಕ  ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಅತಿ ಹಳೆಯ ಕಾನೂನಾಗಿದ್ದ ಸೆಕ್ಷನ್ 497 ವ್ಯಭಿಚಾರವನ್ನು ಕಾನೂನು ಬಾಹಿರ ಎಂದು ಹೇಳುತ್ತಿದ್ದ ಕಾಯ್ದೆಗೆ ಈಗ ತೆರೆಬಿದ್ದಿದೆ.

Last Updated : Sep 27, 2018, 01:40 PM IST
ವ್ಯಭಿಚಾರ ಕಾನೂನು ಅಸಂವಿಧಾನಿಕ,ಸುಪ್ರೀಂ ತೀರ್ಪು: ಸೆಕ್ಷನ್ 497 ಐಪಿಸಿ ಹೇಳುವುದೇನು? title=

ನವದೆಹಲಿ:  ಗುರುವಾರದಂದು ಐಪಿಸಿ ಸೆಕ್ಷನ್ 497 ನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಆ ಮೂಲಕ  ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಅತಿ ಹಳೆಯ ಕಾನೂನಾಗಿದ್ದ ಸೆಕ್ಷನ್ 497 ವ್ಯಭಿಚಾರವನ್ನು ಕಾನೂನು ಬಾಹಿರ ಎಂದು ಹೇಳುತ್ತಿದ್ದ ಕಾಯ್ದೆಗೆ ಈಗ ತೆರೆಬಿದ್ದಿದೆ.

ಭಾರತದ ಮುಖ್ಯ ನ್ಯಾಯಾಧೀಶರಾದ ದಿಪಕ್ ಮಿಶ್ರಾ ಪ್ರಕಾರ, ವ್ಯಭಿಚಾರವು ಆತ್ಮಹತ್ಯೆಗೆ ತುತ್ತಾಗದ ಹೊರತು ಅಪರಾಧವಲ್ಲ. ಐಪಿಸಿಯಲ್ಲಿ ವ್ಯಭಿಚಾರ ಕಾನೂನನ್ನು ವ್ಯಾಖ್ಯಾನಿಸುವ ಸೆಕ್ಷನ್ 497 ನ್ನು ವಿರೋಧಿಸಿದ ಅವರು ವ್ಯಭಿಚಾರವು ವಿವಾಹ ವಿಚ್ಛೇದನ ಸೇರಿದಂತೆ ಹಲವು ವಿವಾದಗಳಿಗೆ ದಾರಿಯಾಗಿದೆ ಆದರೆ ಇದು ಅಪರಾಧವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಹಾಗಾದರೆ ಐಪಿಸಿ ಸೆಕ್ಷನ್ 497 ಹೇಳುವುದೇನು?

ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಒಪ್ಪಿಗೆ ಇಲ್ಲದೆ ಆತನ ಹೆಂಡತಿಯ ಜೊತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೆ ಆದಲ್ಲಿ ಅದು ಅತ್ಯಾಚಾರದ ಅಪರಾಧವಾಗುವುದಿಲ್ಲ. ವ್ಯಭಿಚಾರದ ಅಪರಾಧವು ಐದು ವರ್ಷಗಳ ಕಾಲ ಜೈಲು ಅಥವಾ ದಂಡ ಇಲ್ಲವೇ ಎರಡನ್ನು ಸೇರಿ ಶಿಕ್ಷೆಗೆ ಒಳಪಡಿಸಬಹುದು.ಅಂತಹ ಸಂದರ್ಭದಲ್ಲಿ ಹೆಂಡತಿಯನ್ನು ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. 

ಈ ಸಂದರ್ಭದಲ್ಲಿ ಟ್ರಿಪಲ್ ತಲಾಕ್ ಪ್ರಕರಣದಲ್ಲಿನ ನ್ಯಾಯಾಧೀಶ ನಾರಿಮನ್ ಅವರ ಮಹಿಳೆಯರ ಮತ್ತು ದೃಷ್ಟಿಕೋನಗಳ ಸಾಮಾಜಿಕ ಪ್ರಗತಿಯ ಅಭಿಪ್ರಾಯವನ್ನು ಪರಿಗಣಿಸಲಾಗಿದೆ. ಆದರೆ ಮದುವೆಯ ವಿಚ್ಚೇದನಕ್ಕೆ ವ್ಯಭಿಚಾರವು ಒಂದು ಕಾರಣವಾಗಿದೆ ಸಿಜೆಐ ಹೇಳಿದ್ದಾರೆ. 

Trending News