7th Pay Commission: ಮತ್ತೆ ಹೆಚ್ಚಾಗಲಿದೆ ತುಟ್ಟಿಭತ್ಯೆ, ಈ ತಿಂಗಳು ಸರ್ಕಾರಿ ನೌಕರರಿಗೆ ಸಿಗಲಿದೆ ಮತ್ತೊಂದು ಸಿಹಿಸುದ್ದಿ

7th Pay Commission: ಎಐಸಿಪಿಐ ಪ್ರಕಾರ, ಜೂನ್ 2021 ರ ಸೂಚ್ಯಂಕ 1.1 ಅಂಶಗಳಷ್ಟು ಹೆಚ್ಚಾಗಿದೆ. ಜೂನ್ ನಲ್ಲಿ ಸೂಚ್ಯಂಕ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ಕ್ಕೆ ಶೇ..3 ರಷ್ಟು ತುಟ್ಟಿ ಭತ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

Written by - Nitin Tabib | Last Updated : Sep 21, 2021, 03:49 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ
  • ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆ ಸೆಪ್ಟೆಂಬರ್ ಅಂತ್ಯದೊಳಗೆ ಹೊರಬೀಳುವ ಸಾಧ್ಯತೆ.
  • ಮತ್ತೊಮ್ಮೆ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಸಾಧ್ಯತೆ.
7th Pay Commission: ಮತ್ತೆ ಹೆಚ್ಚಾಗಲಿದೆ ತುಟ್ಟಿಭತ್ಯೆ, ಈ ತಿಂಗಳು ಸರ್ಕಾರಿ ನೌಕರರಿಗೆ ಸಿಗಲಿದೆ ಮತ್ತೊಂದು ಸಿಹಿಸುದ್ದಿ title=
7th Pay Commission Latest News (File Photo)

ನವದೆಹಲಿ:  7th Pay Commission - ಹಬ್ಬದ ಸೀಸನ್ ಆರಂಭವಗುವುದಕ್ಕು ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಮತ್ತೊಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ದೀರ್ಘ ಕಾಲದ ನಿರೀಕ್ಷೆಯ ನಂತರ ತುಟ್ಟಿ ಭತ್ಯೆಯನ್ನು ಶೇ.17 ರಿಂದ ಶೇ.28 ಕ್ಕೆ ಹೆಚ್ಚಿಸಲಾಗಿದೆ. ಇದರ ಜೊತೆಗೆ HRA ಕೂಡ ಶೇ.24 ರಿಂದ ಶೇ.27ಕ್ಕೆ ಹೆಚ್ಚಿಸಲಾಗಿದೆ. ಆದರೆ, ಇವೆಲ್ಲದರ ಬಳಿಕವೂ ಕೂಡ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ.

ತುಟ್ಟಿ ಭತ್ಯೆ (Dearness Allowance) ಮತ್ತೆ ಏರಿಕೆಯಾಗಲಿದೆ
ಕೇಂದ್ರ ಸರ್ಕಾರಿ ನೌಕರರಿಗೆ (Government Employees) ಶೀಘ್ರದಲ್ಲೇ ಮತ್ತೊಂದು ಉಡುಗೊರೆ ಸಿಗುವ ಸಾಧ್ಯತೆ ಇದೆ. ಜುಲೈ 2021 ರ ತುಟ್ಟಿ ಭತ್ಯೆ ಇನ್ನೂ ಘೋಶಿಸಲಾಗಿಲ್ಲ. ಇದು ಶೇ.3 ರಷ್ಟು  ಹೆಚ್ಚಳವಾಗುವ ನಿರೀಕ್ಷೆ ಇದೆ.  ಜೂನ್ 2021 ರಲ್ಲಿ ಎಐಸಿಪಿಐ ದತ್ತಾಂಶವು ಡಿಎ ಅನ್ನು ಶೇ. 31.18 ಎಂಬುದಾಗಿ ಸ್ಪಷ್ಟಪಡಿಸಿದೆ. ಆದರೆ, ಡಿಎ ಲೆಕ್ಕಾಚಾರವನ್ನು ರೌಂಡ್ ಫಿಗರ್ ನಲ್ಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಡಿಎ (DA Hike) ಶೇ. 31% ಪಾವತಿಯಾಗಲಿದೆ. ಅಂದರೆ, 3 ಪ್ರತಿಶತದಷ್ಟು ಹೆಚ್ಚಳ ಮಾಡಿದರೆ, ಉದ್ಯೋಗಿಗಳಿಗೆ ಶೇ.31 ರಷ್ಟು ಡಿಯರ್ನೆಸ್ ಭತ್ಯೆಸಿಗಲಿದೆ.  ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ ಮತ್ತು ಅದನ್ನು ಯಾವಾಗ ಕಾರ್ಯಗತಗೊಳಿಸಲಾಗುವುದು ಎಂಬುದನ್ನು ಹೇಳಲಾಗಿಲ್ಲ.

ಇದನ್ನೂ ಓದಿ-ಅಖಾಡಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವು

ಶೇ. 3 ರಷ್ಟು DA ಹೆಚ್ಚಳ ಫಿಕ್ಸ್
ಉದ್ಯೋಗಿಗಳ ಒಕ್ಕೂಟವು ಸರ್ಕಾರವು ಶೀಘ್ರದಲ್ಲೇ 3% ಡಿಯರ್ನೆಸ್ ಭತ್ಯೆಯ ಹೆಚ್ಚಳವನ್ನು ಘೋಷಿಸಬೇಕು (3% ಡಿಎ ಹೆಚ್ಚಳ) ಎಂದು ಹೇಳುತ್ತಿದೆ. ಎಐಸಿಪಿಐ ಸೂಚ್ಯಂಕದ ಮಾಹಿತಿಯ ಪ್ರಕಾರ, ಜೂನ್ 2021 ರ ಸೂಚ್ಯಂಕವು 1.1 ಅಂಶಗಳಷ್ಟು ಹೆಚ್ಚಾಗಿದೆ. ಜೂನ್ ನಲ್ಲಿ ಸೂಚ್ಯಂಕ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ರ ಡಿಯರ್ನೆಸ್ ಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ-ಮಕ್ಕಳ ಪಾಲಿಗೆ ಮಹತ್ವದ ಸುದ್ದಿ ಪ್ರಕಟ, ಈ ವ್ಯಾಕ್ಸಿನ್ ಮಕ್ಕಳ ಮೇಲೆ ಪ್ರಭಾವಶಾಲಿ

ಈ ತಿಂಗಳಾಂತ್ಯದೊಳಗೆ ನಿರ್ಧಾರ ಸಾಧ್ಯತೆ 
ನೌಕರರ ಸಂಘದ (Employee Union) ಹಿನ್ನೆಲೆ ಜುಲೈ 2021 ಡಿಎ ಇದೆ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಇನ್ನೂ ಯಾವದೇ ಡೆಡ್ ಲೈನ್ ನಿಗದಿಪಡಿಸಲಾಗಿಲ್ಲ. ಆದರೆ, ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಇದರ ಘೋಷಣೆ ಮಾಡಿ, ಅಕ್ಟೋಬರ್ ತಿಂಗಳಿನ ವೇತನದ ಜೊತೆಗೆ ಇದನ್ನು ಪಾವತಿಸಬಹುದು. ನೌಕರರ ಸಂಘದ ಬೇಡಿಕೆಯ ಪ್ರಕಾರ ಒಂದು ವೇಳೆ ಈ ತುಟ್ಟಿಭತ್ಯೆ ಸೆಪ್ಟೆಂಬರ್ ತಿಂಗಳಿನಲ್ಲಿ ಘೋಷಣೆ ಮಾಡಿದರೆ, ಜುಲೈ ನಿಂದ ಸೆಪ್ಟೆಂಬರ್ ವರೆಗೆ ಅರಿಯರ್ ಕೂಡ ಸರ್ಕಾರ ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Pakistan: ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಸಿದ ಹಿಂದೂ ಹುಡುಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News