Diabetes-High BP ಸಮಸ್ಯೆಗಳನ್ನು ತಪ್ಪಿಸಬೇಕೇ? ಇಂದಿನಿಂದಲೇ ಈ 3 ಮಾರ್ಗಸೂಚಿಗಳನ್ನು ಅನುಸರಿಸಿ!

Diabetes-BP-Cholesterol Tips: ಬದಲಾದ ಜೀವನಶೈಲಿ, ಕಳಪೆ ಆಹಾರ ಪದ್ಧತಿಯ ಕಾರಣ ಇತ್ತೀಚೀನ ದಿನಗಳಲ್ಲಿ ಹಲವು ಜನರು ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಟೈಪ್-2 ಮತ್ತು ಅಧಿಕ ಬಿಪಿಯಂತಹ ಲೈಫ್ ಸ್ಟೈಲ್  ಕಾಯಲೆಗಳಿಗೆ  ಸುಲಭವಾಗಿ ಬಲಿಯಾಗುತ್ತಿದ್ದಾರೆ. ಆದಾಗ್ಯೂ, ನೀವು ಸಮಯಕ್ಕೆ ಈ ಸಮಸ್ಯೆಯನ್ನು ತಪ್ಪಿಸಬಹುದು. ಇದಕ್ಕಾಗಿ  ನೀವು ನಿಮ್ಮ ದೈನಂದಿನ ಜೀವನದಲ್ಲಿ, 3 ವಿಷಯಗಳ ಮಾತ್ರ ಕಾಳಜಿ ವಹಿಸಬೇಕು. ಆಗ ಈ ರೋಗಗಳು ಎಂದಿಗೂ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ.  

Written by - Nitin Tabib | Last Updated : Mar 9, 2023, 10:10 PM IST
  • ಅಧಿಕ ಬಿಪಿ ಮತ್ತು ಡಯಾಬಿಟಿಸ್ ಟೈಪ್ -2 ಮುಖ್ಯವಾಗಿ ಹೆಚ್ಚು ಉಪ್ಪು ಮತ್ತು ಸಕ್ಕರೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಉಂಟಾಗುತ್ತದೆ.
  • ಇದರೊಂದಿಗೆ ಎಣ್ಣೆ ಅಥವಾ ಕೊಬ್ಬಿನಾಂಶ ಅಧಿಕವಾಗಿರುವ ಕೆಲ ಆಹಾರಗಳು ನಮ್ಮನ್ನು ಬೇಗನೇ ಅಸ್ವಸ್ಥರನ್ನಾಗಿಸಿ ದುರ್ಬಲಗೊಳಿಸುತ್ತವೆ.
Diabetes-High BP ಸಮಸ್ಯೆಗಳನ್ನು ತಪ್ಪಿಸಬೇಕೇ? ಇಂದಿನಿಂದಲೇ ಈ 3 ಮಾರ್ಗಸೂಚಿಗಳನ್ನು ಅನುಸರಿಸಿ! title=
ಡಬ್ಲ್ಯೂಹೆಚ್ಓ ದೈನಂದಿನ ಆರೋಗ್ಯ ಮಾರ್ಗಸೂಚಿಗಳು!

WHO Tips To Avoid Diabetes-BP-Cholesterol: ಬದಲಾದ ಜೀವನಶೈಲಿ, ಕಳಪೆ ಆಹಾರ ಪದ್ಧತಿಯ ಕಾರಣ ಇತ್ತೀಚೀನ ದಿನಗಳಲ್ಲಿ ಹಲವು ಜನರು ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಟೈಪ್-2 ಮತ್ತು ಅಧಿಕ ಬಿಪಿಯಂತಹ ಲೈಫ್ ಸ್ಟೈಲ್  ಕಾಯಲೆಗಳಿಗೆ  ಸುಲಭವಾಗಿ ಬಲಿಯಾಗುತ್ತಿದ್ದಾರೆ. ಆದಾಗ್ಯೂ, ನೀವು ಸಮಯಕ್ಕೆ ಈ ಸಮಸ್ಯೆಯನ್ನು ತಪ್ಪಿಸಬಹುದು. ಇದಕ್ಕಾಗಿ  ನೀವು ನಿಮ್ಮ ದೈನಂದಿನ ಜೀವನದಲ್ಲಿ, 3 ವಿಷಯಗಳ ಮಾತ್ರ ಕಾಳಜಿ ವಹಿಸಬೇಕು. ಆಗ ಈ ರೋಗಗಳು ಎಂದಿಗೂ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ.

ಇಂದಿನ ಬದಲಾದ ಕಾಲದಲ್ಲಿ ಯುವಕರು ಸುಲಭವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಅವ್ಯವಸ್ಥಿತ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ. ಇದನ್ನು ತಪ್ಪಿಸಲು, ವಿಶ್ವ ಆರೋಗ್ಯ ಸಂಸ್ಥೆಯು ಕಾಲಕಾಲಕ್ಕೆ ಕೆಲ ಅಥವಾ ಇತರ ಆರೋಗ್ಯ ಸಲಹೆಗಳನ್ನು ನೀಡುತ್ತದೆ. ಇದರೊಂದಿಗೆ ಹಲವು ವೈದ್ಯಕೀಯ ಸಂಶೋಧನೆಗಳೂ ಪ್ರಕಟವಾಗುತ್ತವೆ. ಕೋವಿಡ್ ನಂತರ ಹೆಚ್ಚು ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳ ಪೈಕಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಟೈಪ್ -2 ಪ್ರಕರಣಗಳು.

ಅಧಿಕ ಬಿಪಿ ಮತ್ತು ಡಯಾಬಿಟಿಸ್ ಟೈಪ್ -2 ಮುಖ್ಯವಾಗಿ ಹೆಚ್ಚು ಉಪ್ಪು ಮತ್ತು ಸಕ್ಕರೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಉಂಟಾಗುತ್ತದೆ. ಇದರೊಂದಿಗೆ ಎಣ್ಣೆ ಅಥವಾ ಕೊಬ್ಬಿನಾಂಶ ಅಧಿಕವಾಗಿರುವ ಕೆಲ  ಆಹಾರಗಳು ನಮ್ಮನ್ನು ಬೇಗನೇ ಅಸ್ವಸ್ಥರನ್ನಾಗಿಸಿ ದುರ್ಬಲಗೊಳಿಸುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯಕರ ಆಹಾರದ ಬಗ್ಗೆ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು WHO ಹೊರಡಿಸಿದೆ. ಇದರಿಂದ ಜನರು ಜೀವನಶೈಲಿಯಿಂದ ಉಂಟಾಗುವ ಈ ರೋಗಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ, ಬಳಿಕ ಹಲವು ದೇಶಗಳು ತಮ್ಮ ಮಾರುಕಟ್ಟೆಯಲ್ಲಿ ಸಿಗುವ ಜಂಕ್ ಫುಡ್ ಗಳನ್ನು ನಿಷೇಧಿಸುತ್ತಿವೆ.

ಒಂದು ದಿನದಲ್ಲಿ ನೀವು ಎಷ್ಟು ಸಕ್ಕರೆ ಸೇವಿಸಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 6 ರಿಂದ 8 ಚಮಚ ಸಕ್ಕರೆಯನ್ನು ಮಾತ್ರ ಸೇವಿಸಬೇಕು. ನಿಮಗೆ ಶುಗರ್ ಸಮಸ್ಯೆ ಅಥವಾ ಅಧಿಕ ಬಿಪಿ ಸಮಸ್ಯೆ ಇದ್ದರೆ, ನೀವು ಸಂಸ್ಕರಿಸಿದ ಸಕ್ಕರೆಯನ್ನು ಬಳಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಬದಲಿಗೆ, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ತಿನ್ನಿರಿ. ಇದರಿಂದ ನಿಮ್ಮ ಸಿಹಿ ಕಡುಬಯಕೆಗಳು ಶಾಂತವಾಗಿರುತ್ತವೆ ಮತ್ತು ನೀವು ನೈಸರ್ಗಿಕ ಸಕ್ಕರೆಯ ಶಕ್ತಿಯನ್ನು ಪಡೆಯುತ್ತೀರಿ.

ಒಂದು ದಿನದಲ್ಲಿ ಎಷ್ಟು ಉಪ್ಪು ತಿನ್ನುವುದು ಸರಿ?
WHO ಮಾರ್ಗಸೂಚಿಗಳ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಇದಕ್ಕಿಂತ ಹೆಚ್ಚು ಉಪ್ಪನ್ನು ತಿಂದರೆ ಅಧಿಕ ಬಿಪಿ ಮತ್ತು ಮೂಳೆಗಳು ದುರ್ಬಲಗೊಳ್ಳುವ ಸಮಸ್ಯೆ ಹೆಚ್ಚುತ್ತದೆ.

ಇದನ್ನೂ ಓದಿ-World Kidney Day 2023: ಕಿಡ್ನಿ ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ!

ಜನರು ದಿನಕ್ಕೆ ಎಷ್ಟು ಎಣ್ಣೆಯನ್ನು ಸೇವಿಸಬೇಕು?
ಕೊಲೆಸ್ಟ್ರಾಲ್, ಅಧಿಕ ಬಿಪಿ ಅಥವಾ ಶುಗರ್ ಸಮಸ್ಯೆ ಅಥವಾ ಯಾವುದೇ ಗಂಭೀರ ಮತ್ತು ದೀರ್ಘಕಾಲದ ಕಾಯಿಲೆ ಇಲ್ಲದ ಜನರು ದಿನಕ್ಕೆ ಗರಿಷ್ಠ 4 ಚಮಚ ಎಣ್ಣೆಯನ್ನು ಬಳಸಬೇಕು. ಅದೇ ಪ್ರಮಾಣವು ಕರಗಿದ ದೇಸಿ ತುಪ್ಪಕ್ಕೂ ಅನ್ವಯಿಸುತ್ತದೆ. ಆದಾಗ್ಯೂ, ದೇಸಿ ತುಪ್ಪವು ಹಸುವಿನದ್ದಾಗಿದ್ದರೆ, ಅದರ ಪ್ರಮಾಣವನ್ನು ಒಂದು ಅಥವಾ ಎರಡು ಚಮಚಗಳಿಂದ ಹೆಚ್ಚಿಸಬಹುದು. ದೈನಂದಿನ ಜೀವನದಲ್ಲಿ ಈ ನಿಗದಿತ ಪ್ರಮಾಣದ ಕೊಬ್ಬನ್ನು ಹೆಚ್ಚು ತಿನ್ನುವುದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹ ಟೈಪ್-2, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿ ಸಮಸ್ಯೆಯಿಂದ ದೂರವಿರಲು ನೀವು ಬಯಸಿದರೆ, ದೈನಂದಿನ ಆಹಾರದಲ್ಲಿ ಎಣ್ಣೆ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಸರಿಯಾಗಿ ಬಳಸಿ. 

ಇದನ್ನೂ ಓದಿ-Paan Hair Mask: ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಪಾನ್ ಹೆಯರ್ ಮಾಸ್ಕ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News