COVID 19 Vaccine ವಿತರಣೆಗೆ ಸಿದ್ಧತೆ ದೇಶಾದ್ಯಂತ ಡ್ರೈ ರನ್

ಈಗಾಗಲೇ ಡಿಸೆಂಬರ್ 28 ಮತ್ತು 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್‌ನ ಎರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಅವು ಯಶಸ್ವಿಯಾದ ಹಿನ್ನಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕ ಡ್ರೈ ರನ್ ನಡೆಸಲು ನಿರ್ಧರಿಸಲಾಗಿದೆ.  

Written by - Yashaswini V | Last Updated : Dec 31, 2020, 03:43 PM IST
  • ಎಲ್ಲಾ ರಾಜ್ಯಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ
  • ಜನವರಿ 2ರಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಡ್ರೈ ರನ್
  • ಲಸಿಕಾ ವಿತರಣಾ ಪ್ರಕ್ರಿಯೆ ಪರಿಶೀಲಿಸಲು ಡ್ರೈ ರನ್ ಹಮ್ಮಿಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆ
COVID 19 Vaccine ವಿತರಣೆಗೆ ಸಿದ್ಧತೆ  ದೇಶಾದ್ಯಂತ ಡ್ರೈ ರನ್  title=
Dry Run for vaccine administration in all States/UTs

ನವದೆಹಲಿ: ದೇಶಾದ್ಯಂತ COVID- 19 ಲಸಿಕೆ ವಿತರಣೆಗೆ ಸಿದ್ಧತೆ ನಡೆದಿದ್ದು ಕೋವಿಶೀಲ್ಡ್ ಲಸಿಕಾ ವಿತರಣಾ ಪ್ರಕ್ರಿಯೆ ಎಷ್ಟು ಪರಿಣಾಮಕಾರಿ ಆಗಿರಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜನವರಿ 2ರಂದು 'ಡ್ರೈ ರನ್' (Dry Run) ನಡೆಸುವಂತೆ ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.

ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶಾದ್ಯಂತ ಡ್ರೈ ರನ್' ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ COVID -19 ಲಸಿಕೆ (Covid 19 Vaccine) ವಿತರಣೆಯ ಸಿದ್ಧತೆಯನ್ನು ಪರಿಶೀಲಿಸಲಾಯಿತು.

ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯ  ಕಾರ್ಯದರ್ಶಿಗಳು, NHM ವ್ಯವಸ್ಥಾಪಕ ನಿರ್ದೇಶಕರು, ಆರೋಗ್ಯ ನಿರ್ವಾಹಕರು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ 'ಕೋವಿಶೀಲ್ಡ್ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅವರವರ ರಾಜ್ಯಗಳ ಎರಡೆರಡು ನಗರಗಳಲ್ಲಿ ಜನವರಿ ‌2ರಂದು ಡ್ರೈ‌ ರನ್ ಮಾಡಬೇಕು' ಎಂದು ನಿರ್ದೇಶಿಸಿದರು.

ಇದನ್ನೂ ಓದಿ: ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ

ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಡ್ರೈ ರನ್ ನಡೆಸಲು ನಿರ್ಧರಿಸಲಾಯಿತಾದರೂ ಅಂತಿಮವಾಗಿ ನಗರಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಯಿತು. ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರಗಳು ರಾಜಧಾನಿಯನ್ನು ಹೊರತುಪಡಿಸಿ ಬೇರೆ ಪ್ರಮುಖ ನಗರಗಳಲ್ಲಿ ಡ್ರೈ ರನ್ ನಡೆಸುವುದಾಗಿ ತಿಳಿಸಿವೆ ಎನ್ನಲಾಗಿದೆ.

ಕೋ-ವಿನ್ ಅಪ್ಲಿಕೇಶನ್  (Co-Win App) ಬಳಕೆಯ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು, ಯೋಜನೆ ಮತ್ತು ಅನುಷ್ಠಾನದ ನಡುವಿನ ಸಂಪರ್ಕಗಳನ್ನು ಪರೀಕ್ಷಿಸುವುದು ಮತ್ತು ಸವಾಲುಗಳನ್ನು ಗುರುತಿಸುವುದು ಹಾಗೂ ನಿಜವಾದ ಅನುಷ್ಠಾನಕ್ಕೆ ಮುನ್ನ ಮಾರ್ಗದರ್ಶನ ಮಾಡುವುದು ಡ್ರೈ ರನ್ ಉದ್ದೇಶವಾಗಿದೆ.

ಕರೋನಾವೈರಸ್ ಲಸಿಕೆ (Coronavirus Vaccine) ವಿತರಣಾ ಕ್ರಮವು 2020ರ ಡಿಸೆಂಬರ್ 20ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರ ಇರುತ್ತದೆ. ಪ್ರತಿ ಮೂರು ಸೆಷನ್ ಸೈಟ್‌ಗಳಿಗೆ ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಯ ಉಸ್ತುವಾರಿ ಇರಲಿದೆ. 25 ಪರೀಕ್ಷಾ ಫಲಾನುಭವಿಗಳನ್ನು (ಆರೋಗ್ಯ ಕಾರ್ಯಕರ್ತರು) ಗುರುತಿಸಲಾಗುತ್ತದೆ. ಈ ಫಲಾನುಭವಿಗಳ ಡೇಟಾವನ್ನು ಕೋ-ವಿನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರಾ ಎಂದು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ. ಹೆಲ್ತ್ ಕೇರ್ ವರ್ಕರ್ (Health Care Workers) ಫಲಾನುಭವಿಗಳ ಡೇಟಾವನ್ನು ಅಪ್‌ಲೋಡ್ ಮಾಡಲಿದ್ದಾರೆ. 

ಇದನ್ನೂ ಓದಿ: Fraud In The Name Of Vaccine: Covid-19 ವ್ಯಾಕ್ಸಿನ್ ಹೆಸರಿನಲ್ಲಿ ವಂಚನೆ, ತಪ್ಪಿಸಿಕೊಳ್ಳುವುದು ಹೇಗೆ?

ಸ್ಥಳಾವಕಾಶ, ವ್ಯವಸ್ಥಾಪನಾ ವ್ಯವಸ್ಥೆ, ಇಂಟರ್ನೆಟ್ ಸಂಪರ್ಕ, ವಿದ್ಯುತ್, ಸುರಕ್ಷತೆ ಇತ್ಯಾದಿ ವ್ಯವಸ್ಥೆಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಾಡಿಕೊಡಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಗುತ್ತದೆ. 

ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಲಸಿಕೆ ನಿರ್ವಾಹಕರು ಪ್ರಮುಖ ಪಾತ್ರ ವಹಿಸುವುದರಿಂದ, ತರಬೇತುದಾರರು ಮತ್ತು ಲಸಿಕೆ ನೀಡುವವರಿಗೆ ಈಗಾಗಲೇ ತರಬೇತಿ ಕೊಡಲಾಗಿದೆ. ಈ ಉದ್ದೇಶಕ್ಕಾಗಿ ಸುಮಾರು 96,000 ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ. 2,360 ತರಬೇತುದಾರರು 719 ಜಿಲ್ಲೆಗಳಲ್ಲಿ 57,000ಕ್ಕೂ ಜನರಿಗೆ ತರಬೇತಿ ನೀಡಿದ್ದಾರೆ.

ಯಾವುದೇ ಲಸಿಕೆ / ಸಾಫ್ಟ್‌ವೇರ್ ಸಂಬಂಧಿತ ಪ್ರಶ್ನೆಗೆ ರಾಜ್ಯಗಳು ರಾಜ್ಯ ಸಹಾಯವಾಣಿ 104 ಸಂಖ್ಯೆಗೆ (1075 ರ ಜೊತೆಗೆ ಬಳಸಲಾಗುವುದು) ಕರೆ ಮಾಡಬಹುದು. ಯಾವುದೇ ಸಮಸ್ಯೆ ಪರಿಹರಿಸಲು ಆರೋಗ್ಯ ಸಚಿವಾಲಯ ಹೊರಡಿಸಿದ FAQ ಗಳನ್ನು ಪೂರ್ವಭಾವಿಯಾಗಿ ಬಳಸಬೇಕಾಗಿದೆ.

ಇದನ್ನೂ ಓದಿ: Good News! Zydus Cadila ಲಸಿಕೆಯ ಪರೀಕ್ಷೆ ಯಶಸ್ವಿ, No Side Effect

ಈಗಾಗಲೇ ಡಿಸೆಂಬರ್ 28 ಮತ್ತು 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್‌ನ ಎರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಅವು ಯಶಸ್ವಿಯಾದ ಹಿನ್ನಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕ ಡ್ರೈ ರನ್ ನಡೆಸಲು ನಿರ್ಧರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News