ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಲು ಸೂಪರ್ ಫುಡ್ ಗಳಿವು ..!

ಸಮತೋಲಿತ ಆಹಾರದಂತೆ, ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸಹ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಯಾವ ಆಹಾರಗಳು ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತವೆ  ನೋಡೋಣ. 

Written by - Ranjitha R K | Last Updated : Aug 26, 2022, 01:14 PM IST
  • ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ.
  • ಬಲಿಷ್ಠ ಮೂಳೆಗಳಿಗಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಗತ್ಯವಿದೆ.
  • ಈ ಆಹಾರಗಳು ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುತ್ತವೆ
ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಲು ಸೂಪರ್ ಫುಡ್ ಗಳಿವು ..! title=
Calcium rich food (file photo)

ಬೆಂಗಳೂರು : ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ.  ದೇಹಕ್ಕೆ ಅಗತ್ಯವಾದ ಪೋಷಣೆ ಸಿಗಬೇಕಾದರೆ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಬಲಿಷ್ಠ ಮೂಳೆಗಳಿಗಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಗತ್ಯವಿದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ, ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳ ದೌರ್ಬಲ್ಯವು ಸಂಧಿವಾತ, ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸಮತೋಲಿತ ಆಹಾರದಂತೆ, ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸಹ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಯಾವ ಆಹಾರಗಳು ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತವೆ  ನೋಡೋಣ. 

ಡೈರಿ ಆಹಾರಗಳು :
ಸಸ್ಯಾಹಾರಿಗಳಿಗೆ, ಹಾಲು, ಮೊಸರು, ಚೀಸ್ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಡೈರಿ ಆಹಾರಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಕಂಡುಬರುತ್ತದೆ. ಆಹಾರದಲ್ಲಿ ಹಾಲು, ಮೊಸರು ಮತ್ತು ಚೀಸ್ ಅನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟದಲ್ಲಿ ಹಾಲನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.   

ಇದನ್ನೂ ಓದಿ : Baking Soda: ಅಡಿಗೆ ಸೋಡಾದ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ

ರಾಗಿ : 
ಸಾಮಾನ್ಯ ಆಹಾರದಲ್ಲಿ ರಾಗಿ ಆಹಾರದ ಬಳಕೆ ತುಂಬಾ ಕಡಿಮೆ. ಆದರೆ ಬಹುತೇಕ ಎಲ್ಲಾ ಆಹಾರ ತಜ್ಞರು ತೂಕವನ್ನು ಕಳೆದುಕೊಳ್ಳಲು ಮತ್ತು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಲು ರಾಗಿಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ರಾಗಿಯ ಸೇವನೆಯು ಮೂಳೆಗಳ  ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. 

 ಮೊಟ್ಟೆ ಕ್ಯಾಲ್ಸಿಯಂನ ಮೂಲ :
ದೇಹದಲ್ಲಿ ಕ್ಯಾಲ್ಸಿಯಂನ ಕೊರ್ಯೇಯಾಗದಂತೆ ನೋಡಿಕೊಳ್ಳಬೇಕಾದರೆ ಮೊಟ್ಟೆಗಳನ್ನು ನಿಯಮಿತವಾಗಿ ಸೇವಿಸಬೇಕು. ಇದು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಕ್ಯಾಲ್ಸಿಯಂ ಹೊರತುಪಡಿಸಿ, ಮೊಟ್ಟೆಯ ಹಳದಿ ಭಾಗದಲ್ಲಿ ಅನೇಕ ಇತರ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. 

ಇದನ್ನೂ ಓದಿ : Health Tips: ಬರ್ಗರ್, ಪಿಜ್ಜಾ ತಿಂದರೆ ನಿಮ್ಮ ಆಯಸ್ಸು ನಿಮಿಷಕ್ಕೆ ಇಷ್ಟರಂತೆ ಕಡಿಮೆಯಾಗುತ್ತೆ!

ನುಗ್ಗೆ ಕಾಯಿ : 
ಆಯುರ್ವೇದದ ಪ್ರಕಾರ, ಕ್ಯಾಲ್ಸಿಯಂ ಕೊರತೆಯು ನುಗ್ಗೆ ಕಾಯಿ ಸೇವನೆಯಿಂದ ದೂರವಾಗುತ್ತದೆ. ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸುವ ಗುಣವು  ನುಗ್ಗೆ ಸೊಪ್ಪಿನಲ್ಲಿ ಕೂಡಾ ಕಂಡು ಬರುತ್ತದೆ.  ಹಾಲಿಗಿಂತ ಹಲವು ಪಟ್ಟು ಹೆಚ್ಚು ಕ್ಯಾಲ್ಸಿಯಂ  ನುಗ್ಗೆ ಕಾಯಿಯಲ್ಲಿ ಕಂಡುಬರುತ್ತದೆ.

ಕಾಳುಗಳು ಮತ್ತು ಬೀನ್ಸ್
ಹಸಿರು ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಿನ ಹಸಿರು ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ಕಂಡುಬರುತ್ತದೆ.  

ಅಣಬೆ :
ದೇಹದ ಮೂಳೆಗಳು ದುರ್ಬಲವಾಗುತ್ತಿದ್ದರೆ, ಆಹಾರದಲ್ಲಿ ಅಣಬೆಗಳನ್ನು ಸೇರಿಸಿಕೊಳ್ಳಬೇಕು. ಅಣಬೆಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಕಂಡುಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಾರಕ್ಕೊಮ್ಮೆಯಾದರೂ ಅಣಬೆಗಳನ್ನು ಸೇವಿಸಬೇಕು ಎಂದು ಆಹಾರ ತಜ್ಞರು ನಂಬುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News