ಬ್ಲಡ್ ಶುಗರ್ ಜಾಸ್ತಿಯಾಗಿರುವುದನ್ನು ಸಾರಿ ಹೇಳುತ್ತವೆ ರಾತ್ರಿ ಹೊತ್ತು ಕಾಣಿಸುವ ಈ ಲಕ್ಷಣಗಳು !

ರಾತ್ರಿ ವೇಳೆ ಕಂಡುಬರುವ ಕೆಲವು ಲಕ್ಷಣಗಳು ಮಧುಮೇಹ ನಿಮ್ಮನ್ನು ಕಾಡುತ್ತಿದೆ ಎನ್ನುವುದನ್ನು  ಸೂಚಿಸುತ್ತದೆ. 

Written by - Ranjitha R K | Last Updated : Jul 18, 2024, 01:39 PM IST
  • ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಯಾವುದೇ ಚಿಕಿತ್ಸೆ ಇಲ್ಲ.
  • ಮಧುಮೇಹ ಒಮ್ಮೆ ಕಾಣಿಸಿಕೊಂಡರೆ, ಜೀವನಪೂರ್ತಿ ಅದರೊಂದಿಗೆ ಬದುಕಬೇಕು.
  • ಔಷಧಿಗಳನ್ನು ಬಳಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
 ಬ್ಲಡ್ ಶುಗರ್ ಜಾಸ್ತಿಯಾಗಿರುವುದನ್ನು ಸಾರಿ ಹೇಳುತ್ತವೆ ರಾತ್ರಿ ಹೊತ್ತು ಕಾಣಿಸುವ ಈ ಲಕ್ಷಣಗಳು ! title=

ಬೆಂಗಳೂರು : ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಯಾವುದೇ ಚಿಕಿತ್ಸೆ ಇಲ್ಲ. ಮಧುಮೇಹ ಒಮ್ಮೆ ಕಾಣಿಸಿಕೊಂಡರೆ, ಜೀವನಪೂರ್ತಿ ಅದರೊಂದಿಗೆ ಬದುಕಬೇಕು.ಆದರೆ ಹಲವಾರು ರೀತಿಯ ಔಷಧಿಗಳನ್ನು ಬಳಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಆಹಾರ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕವೂ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ಕಂಟ್ರೋಲ್ ಮಾಡಬಹುದು. ಮಧುಮೇಹದ ಕೆಲವು ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಮುಖ್ಯವಾಗಿದೆ.ರಾತ್ರಿ ವೇಳೆ ಕಂಡುಬರುವ ಕೆಲವು ಲಕ್ಷಣಗಳು ಮಧುಮೇಹ ನಿಮ್ಮನ್ನು ಕಾಡುತ್ತಿದೆ ಎನ್ನುವುದನ್ನು  ಸೂಚಿಸುತ್ತದೆ. 

ಪಾದದ ಅಡಿಭಾಗಗಳಲ್ಲಿ ಉರಿ : 
ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಪಾದದ ಅಡಿಭಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಪಾದದ ಅಡಿಭಾಗದಲ್ಲಿ ಸುಡುವ ಸಂವೇದನೆ ಕಾಣಿಸಿಕೊಂಡರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿದೆ ಎಂದು ಅರ್ಥ.  

ಇದನ್ನೂ ಓದಿ : ಇಂತಹ ಆಹಾರಗಳ ಸೇವನೆಯಿಂದಲೂ ಹೆಚ್ಚಾಗುತ್ತೆ ಕ್ಯಾನ್ಸರ್ ಅಪಾಯ

ರಾತ್ರಿ ಬಾಯಾರಿಕೆ :
ಅತಿಯಾದ ಬಾಯಾರಿಕೆಯ ಭಾವನೆ,ವಿಶೇಷವಾಗಿ ರಾತ್ರಿ ವೇಳೆ ಬಾಯಾರಿಕೆಯಾಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರುತ್ತದೆ.   ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಈ ರೀತಿಯಾಗುತ್ತದೆ.

ರಾತ್ರಿಯಲ್ಲಿ  ಪದೇ ಪದೇ ಮೂತ್ರ ವಿಸರ್ಜನೆ :
ಅಧಿಕ ರಕ್ತದ ಸಕ್ಕರೆಯ ಕಾರಣದಿಂದಾಗಿ, ಮಧುಮೇಹ ರೋಗಿಗಳಿಗೆ ಪದೇ ಪದೇ ಮೂತ್ರ ಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮಾತ್ರ ಈ ರೋಗಲಕ್ಷಣಗಳು ಹೆಚ್ಚಾಗುತ್ತವೆ.ಮಧುಮೇಹ ರೋಗಿಗಳಲ್ಲಿ ಅಂತಹ ರೋಗಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ  : ಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿ

ಸರಿಯಾಗಿ ನಿದ್ದೆ ಬಾರದಿರುವುದು : 
ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಅವರ ದೇಹದಲ್ಲಿ ಚಡಪಡಿಕೆ ಹೆಚ್ಚುತ್ತದೆ.ಚಡಪಡಿಕೆಯಿಂದ ರಾತ್ರಿ ಮಲಗಲು ತೊಂದರೆಯಾಗುತ್ತದೆ.ರಾತ್ ಹೊತ್ತು ಅತಿಯಾದ ಚಡಪಡಿಕೆ ಕಾಣಿಸಿಕೊಂಡರೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ,ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು.

ರಾತ್ರಿಯಲ್ಲಿ ದೇಹ ನೋವು :
ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ, ಇದರಿಂದ ದೇಹದ ನೋವಿನ ಸಮಸ್ಯೆಯೂ ಹೆಚ್ಚಾಗುತ್ತದೆ. ವಿಶೇಷವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ರೋಗಿಗೆ ರಾತ್ರಿಯಲ್ಲಿ ದೇಹ ನೋವು ಅಥವಾ ಕೀಲು ನೋವು ಕಾಣಿಸಿಕೊಳ್ಳುತ್ತದೆ.

(ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News