ನೀವು ಕೂಡಾ ಈ ಹಣ್ಣುಗಳ ಸಿಪ್ಪೆ ಸುಲಿದು ತಿನ್ನುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ

ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವುದರಿಂದ ಆ ಹಣ್ಣಿನಿಂದ ದೇಹಕ್ಕೆ ಸಿಗಬೇಕಾದ ಪೋಷಕ ತತ್ವಗಳು ಕಸದ ಬುಟ್ಟಿ ಸೇರಿ ಬಿಡುತ್ತವೆ. 

Written by - Ranjitha R K | Last Updated : Nov 9, 2023, 03:49 PM IST
  • ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗ.
  • ಹಣ್ಣಿನಲ್ಲಿ ಮಾತ್ರವಲ್ಲ ಅದರ ಸಿಪ್ಪೆಯಲ್ಲಿಯೂ ಪೋಷಕಾಂಶಗಳು ಇರುತ್ತವೆ.
  • ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನಬೇಡಿ
ನೀವು ಕೂಡಾ ಈ ಹಣ್ಣುಗಳ ಸಿಪ್ಪೆ ಸುಲಿದು ತಿನ್ನುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ  title=

ಬೆಂಗಳೂರು :  ಹಣ್ಣುಗಳನ್ನು ಸೇವಿಸುವವರು ಆರೋಗ್ಯವಾಗಿರುತ್ತಾರೆ ಎನ್ನುವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗ. ಆದರೆ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಸರಿಯಾಗಿ ತಿನ್ನುವುದು ಮುಖ್ಯ. ಕೆಲವರಿಗೆ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸುಲಿದೇ ತಿನ್ನುವ ಅಭ್ಯಾಸವಿರುತ್ತದೆ. ಹಣ್ಣಿನಲ್ಲಿ ಮಾತ್ರವಲ್ಲ ಅದರ ಸಿಪ್ಪೆಯಲ್ಲಿಯೂ  ಪೋಷಕಾಂಶಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಹಣ್ಣುಗಳಿಗೆ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇದರಿಂದಾಗಿ ಜನರು ಹಣ್ಣುಗಳ ಸಿಪ್ಪೆಯನ್ನು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವುದರಿಂದ ಆ ಹಣ್ಣಿನಿಂದ ದೇಹಕ್ಕೆ ಸಿಗಬೇಕಾದ ಪೋಷಕ ತತ್ವಗಳು ಕಸದ ಬುಟ್ಟಿ ಸೇರಿ ಬಿಡುತ್ತವೆ. ಅಂದರೆ  ಹಣ್ಣುಗಳ ಸಿಪ್ಪೆಯಲ್ಲಿ ವಿಟಮಿನನ್ ಗಳು,  ಖನಿಜಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಗಳು ನಮ್ಮ ದೇಹಕ್ಕೆ ಸಿಗುವುದಿಲ್ಲ.  

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನಬೇಡಿ : 
ನಾಶ್ ಪತಿ : 

ನಾಶ್ ಪತಿ ಅಥವಾ ಪಿಯರ್ಸ್ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕು. ಯಾಕೆಂದರೆ ಇದರ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಕಂಡುಬರುತ್ತವೆ. ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿಂದರೆ ದೇಹಕ್ಕೆ ಡಯೆಟರಿ ಫೈಬರ್ ಸಿಗುತ್ತದೆ. ಹಾಗಾಗಿ  ಪಿಯರ್ಸ್ ಅನ್ನು ಯಾವಾಗಲೂ ಸಿಪ್ಪೆ ತೆಗೆಯದೆ ತಿನ್ನಬೇಕು.

ಇದನ್ನೂ ಓದಿ :  ಬೆಲ್ಲದ ಜೊತೆಗೆ ಹಸಿ ಕೊಬ್ಬರಿ ತಿನ್ನುವುದರಿಂದ ಆಗುವ ಲಾಭ ತಿಳಿದರೆ ಅಚ್ಚರಿ ಪಡುತ್ತೀರಿ!

ಪೇರಳೆ ಹಣ್ಣು : 
ಪೇರಳೆ ತುಂಬಾ ಆರೋಗ್ಯಕರ ಹಣ್ಣು. ಆದರೆ ಪೇರಳೆಯನ್ನು ಸಿಪ್ಪೆಯೊಂದಿಗೆ ಸೇವಿಸಬೇಕು. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ನಾರಿನಾಂಶ ಮತ್ತು ಖನಿಜಗಳು ಪೇರಳೆ ಹಣ್ಣಿನಲ್ಲಿ ಕಂಡುಬರುತ್ತವೆ. ಆದ್ದರಿಂದ, ಪೇರಳೆ ಹಣ್ಣನ್ನು  ಸಿಪ್ಪೆ ಸುಲಿದ ನಂತರವೇ ತಿನ್ನಬೇಕು.  

ಸೇಬು : 
ಸೇಬನ್ನು ಸಿಪ್ಪೆ ತೆಗೆದ ನಂತರ ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಇದು ತಪ್ಪು. ಸೇಬಿನ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಕಂಡುಬರುತ್ತದೆ. ಆದ್ದರಿಂದ ಸೇಬನ್ನು ತೊಳೆದು ನೇರವಾಗಿ ತಿನ್ನಬೇಕು ಮತ್ತು ಸಿಪ್ಪೆ ತೆಗೆದು ತಿನ್ನಬಾರದು. 

ಇದನ್ನೂ ಓದಿ :  ಐಸ್ ಕ್ರೀಮ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಂತೆ, ಇಷ್ಟೆಲ್ಲಾ ಲಾಭಗಳಿವೆ.!

ಕಿವಿ :
ಕಿವಿಯನ್ನು ಸಿಪ್ಪೆ ತೆಗೆದು ತಿನ್ನಬಾರದು. ಏಕೆಂದರೆ ಕಿವಿಯ ಸಿಪ್ಪೆಯಲ್ಲಿ ನಾರಿನಂಶ, ಫೋಲೇಟ್, ವಿಟಮಿನ್ ಇ ಮುಂತಾದ ಅಂಶಗಳು ಕಂಡುಬರುತ್ತವೆ. ಆದ್ದರಿಂದ ಕಿವಿ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕು.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News