ಎಚ್ಚರಿಕೆ...! ಹಾಲಿನ ಪ್ಯಾಕೆಟ್ ಕುರಿತು FSSAI ನೀಡಿರುವ ಈ ಸಲಹೆ ತಪ್ಪದೆ ಓದಿ

ಕೊರೊನಾ ಕಾಲದಲ್ಲಿ ಜನರು ಯಾವುದೇ ಕೆಲಸ ಮಾಡಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವುದಾಗಲಿ ಅಥವಾ ಯಾವುದೇ ವಸ್ತುವನ್ನು ಮನೆಗೆ ತರುವದಾಗಲಿ ಜನರು ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾಗುವ ಅವಶ್ಯಕತೆ ಇದೆ.

Last Updated : Aug 12, 2020, 05:23 PM IST
ಎಚ್ಚರಿಕೆ...! ಹಾಲಿನ ಪ್ಯಾಕೆಟ್ ಕುರಿತು FSSAI ನೀಡಿರುವ ಈ ಸಲಹೆ ತಪ್ಪದೆ ಓದಿ title=

ನವದೆಹಲಿ: ಕೊರೊನಾ ಕಾಲದಲ್ಲಿ ಜನರು ಯಾವುದೇ ಕೆಲಸ ಮಾಡಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವುದಾಗಲಿ ಅಥವಾ ಯಾವುದೇ ವಸ್ತುವನ್ನು ಮನೆಗೆ ತರುವದಾಗಲಿ ಜನರು ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾಗುವ ಅವಶ್ಯಕತೆ ಇದೆ. ಈ ಕುರಿತು ಇತ್ತೀಚೆಗಷ್ಟೇ ಮಾಹಿತಿಯೊಂದನ್ನು ನೀಡಿರುವ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ(FSSAI), ಕೊರೊನಾ ಕಾಲದಲ್ಲಿ ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಸಿಗುವ ಹಾಲನ್ನು ಮನೆಗೆ ತರುವಾಗ ಹಾಗೂ ತಂದು ಅದನ್ನು ಕಾಯಿಸಿ ಉಪ್ಯೋಗಿಸುವುಆಗ ಹಲವು ಸಂಗತಿಗಳನ್ನು ನೆನಪಿನಲ್ಲಿಡಬೇಕು ಎಂದಿದೆ. ಈ ಕುರಿತು ಹೇಳಿಕೆ ನೀಡಿರುವ FSSAI, ನೀವು ಸ್ವತಃ ಮಾಸ್ಕ್ ಧರಿಸಿ ಹಾಗೂ ಹಾಲಿನ ಪ್ಯಾಕೆಟ್ ವಿತರಿಸಲು ಬರುವವರು ಮಾಸ್ಕ್ ಧರಿಸಿರುವುದನ್ನು ಖಾತರಿಪಡಿಸಿಕೊಳ್ಳಿ ಎಂದಿದೆ. ಹಾಗಾದರೆ ಬನ್ನಿ ಇನ್ನೂ ಕೆಲವು ಸಂಗತಿಗಳನ್ನು ತಿಳಿದುಕೊಳ್ಳೋಣ.

- ನೀವು ಹಾಲಿನ ಪ್ಯಾಕೆಟ್ ಅನ್ನು ಮಾರುಕಟ್ಟೆಯಿಂದ ಮನೆಗೆ ತಂದಾಗ, ಅದನ್ನು ತಕ್ಷಣ ಬಳಸಬೇಡಿ. ಬದಲಾಗಿ, ಅಡುಗೆ ಮನೆ ಬೇಸಿನ್ ಅಥವಾ ಬಾತ್ರೂಮ್ ಟ್ಯಾಪ್ ಓಪನ್ ಮಾಡಿ ಹರಿಯುತ್ತಿರುವ ನೀರಿನಲ್ಲಿ  ಈ ಪ್ಯಾಕೆಟ್ ಅನ್ನು ಚೆನ್ನಾಗಿ ತೊಳೆಯಿರಿ.
- ನಿಮಗೆ ಅಗತ್ಯ ಎನಿಸಿದರೆ, ನೀವು ಈ ಪ್ಯಾಕೆಟ್ ಅನ್ನು ಸೋಪಿನಿಂದ ತೊಳೆಯಬಹುದು.ಆದರೆ ಹರಿಯುತ್ತಿರುವ ನೀರಿನಲ್ಲಿ ಹಾಲಿನ ಪ್ಯಾಕೆಟ್ ಅನ್ನು ಚೆನ್ನಾಗಿ ತೊಳೆದು, ನಿಮ್ಮ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ಬಳಸಿ ಸ್ವಚ್ಛಗೊಳಿಸಿದರೆ ಸಾಕು.
- ಪ್ಯಾಕೆಟ್ ತೊಳೆದ ನಂತರ, ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ ಮತ್ತು ನಂತರ ಈ ಪ್ಯಾಕೆಟ್ ಅನ್ನು ಶುದ್ಧ ಕತ್ತರಿ ಸಹಾಯದಿಂದ ಕತ್ತರಿಸಿ ಮತ್ತು ಪಾತ್ರೆಯಲ್ಲಿ ಹಾಲನ್ನು ಹಾಕಿ.
- ಹಾಲಿನ ಪಾತ್ರೆಗೆ ಹಾಲನ್ನು ಹಾಕುತ್ತಿರುವಾಗ ಪ್ಯಾಕೆಟ್ ಮೇಲಿರುವ ವಸ್ತು ಹಾಲಿಗೆ ಬೀಳದಂತೆ ಎಚ್ಚರಿಕೆ ವಹಿಸಿ.
- ಇದನ್ನು ತಪ್ಪಿಸಲು ಹಾಲನ್ನು ಪಾತ್ರೆಗೆ ಹಾಕುವ ಮೊದಲು ಸ್ವಚ್ಛವಾಗಿ ತೊಳೆದ ಪ್ಯಾಕೆಟ್ ಅನ್ನು ಚೆನ್ನಾಗಿ ಬಟ್ಟೆಯಿಂದ ಶುಚಿಗೊಳಿಸಿ.
- ಸಾಮಾನ್ಯವಾಗಿ ಪ್ಯಾಕೆಟ್ ನಲ್ಲಿ ಬರುವ ಹಾಲು ಪ್ರೋಸೆಸ್ಸ್ದ್ ಮಿಲ್ಕ್ ಆಗಿರುತ್ತದೆ. ಅದನ್ನು ಕಾಯಿಸದೇ ಬಳಸಬೇಡಿ. 
- ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ನೀವು ಹಾಲನ್ನು ಚೆನ್ನಾಗಿ ಕುದಿಸಿ ನಂತರ ಉಪಯೋಗಿಸಿದರೆ ಉತ್ತಮ.
- ಒಂದು ವೇಳೆ ಹೈಜಿನ್  ಕುರಿತು ನೀವು ವಿಶ್ವಾಸ ಹೊಂದಿದ್ದರೆ, ಹಾಲನ್ನು ನೀವು ನೇರವಾಗಿ ಬಳಸಬಹುದಾಗಿದೆ.

Trending News