ಮಕ್ಕಳು ಮನೆಯಿಂದ ಹೊರಗೆ ಆಟವಾಡುವುದು ಬಹಳ ಮುಖ್ಯ: ಸಂಶೋಧನೆ

ಇಂದಿನ ಕಂಪ್ಯೂಟರ್ ಗೇಮ್ ಯುಗದಲ್ಲಿ ಮಕ್ಕಳು ಮನೆಯಿಂದ ಹೊರಬಂದು ಅಕ್ಕ-ಪಕ್ಕದ ಮಕ್ಕಳೊಂದಿಗೆ ಆಟವಾಡುವುದು ಬಹಳ ಅವಶ್ಯಕ.

Last Updated : Feb 7, 2019, 05:46 PM IST
ಮಕ್ಕಳು ಮನೆಯಿಂದ ಹೊರಗೆ ಆಟವಾಡುವುದು ಬಹಳ ಮುಖ್ಯ: ಸಂಶೋಧನೆ title=
Pic Courtesy: IANS

ನ್ಯೂಯಾರ್ಕ್: ಇಂದಿನ ಕಂಪ್ಯೂಟರ್ ಗೇಮ್ ಯುಗದಲ್ಲಿ ಮಕ್ಕಳು ಮನೆಯಿಂದ ಹೊರಬಂದು ಅಕ್ಕ-ಪಕ್ಕದ ಮಕ್ಕಳೊಂದಿಗೆ ಆಟವಾಡುವುದು ಬಹಳ ಅವಶ್ಯಕ ಎಂದು ಹೊಸ ಅಧ್ಯಯನವೊಂದು ಕಂಡು ಹಿಡಿದಿದೆ. ಮಕ್ಕಳು ಶಾಲೆಯಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕುಟುಂಬದ ಸದಸ್ಯರು ಭಾವಿಸುತ್ತಾರೆ. ಆದರೆ ಯುವ ಪೀಳಿಗೆಗೆ ಅದಕ್ಕಿಂತ ಹೆಚ್ಚು ಆಟವಾಡುವ ಅಗತ್ಯವಿದೆ ಎಂದು ಈ ಅಧ್ಯಯನ ತಿಳಿಸಿದೆ. 

ರೈಸ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಲಾರಾ ಕಬ್ರಿ, ದಿನನಿತ್ಯದ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಲು ಮಕ್ಕಳಿಗೆ ಅವಕಾಶ ಕಲ್ಪಿಸಬೇಕು. ಸಂಘಟಿತ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಾಗಿ ಎಷ್ಟು ಸಮಯ ಅವಶ್ಯಕವೆಂದು ತಿಳಿದುಕೊಳ್ಳುವಲ್ಲಿ ಸಮಸ್ಯೆಯಿದೆ ಎಂದು ಅವರು ಹೇಳಿದರು.

"ತಮ್ಮ ಮಕ್ಕಳು ವೇಗವಾಗಿ ಉಸಿರಾಡುವ ಮತ್ತು ಕಡಿಮೆ ಬೆವರುವಿಕೆ ಬಗ್ಗೆ ಹಲವರು ಹೇಳುತ್ತಾರೆ, ಇದರರ್ಥ ಅವರು ಸಾಕಷ್ಟು ಕೆಲಸ ಮಾಡುತ್ತಿಲ್ಲ" ಎಂದು ಕಬ್ರಿ ತಿಳಿಸಿದರು.

"ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶಗಳು ಇರಬೇಕು, ನಿಮ್ಮ ಮಕ್ಕಳನ್ನು ಹೊರತರಲು ಮತ್ತು ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಲು, ದ್ವಿಚಕ್ರಗಳನ್ನು ಓಡಿಸಲು ಅವಕಾಶ ನೀಡಬೇಕು" ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಕ್ಕಳು ಮುಖ್ಯವಾಗಿ ದಿನದಲ್ಲಿ ಒಂದು ಗಂಟೆ ಏರೋಬಿಕ್ ಚಟುವಟಿಕೆ ಮೀಸಲಿಡಬೇಕು. ಆದರೆ ಇತರ ಸಂಶೋಧನೆಗಳಲ್ಲಿ, ಉತ್ಕೃಷ್ಟ ಕ್ರೀಡೆಗಳಲ್ಲಿ ತೊಡಗಿರುವ ಮಕ್ಕಳು 20-30 ನಿಮಿಷಗಳಲ್ಲಿ ಮಾತ್ರ ಕಠಿಣ ಕೆಲಸ ಮಾಡುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಜರ್ನಲ್ ಆಫ್ ಫಂಕ್ಷನಲ್ ಮಾರ್ಫಾಲಜಿ ಅಂಡ್ ಕಿನಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಶೋಧಕರು 10-17 ವರ್ಷಗಳ 100 ಮಕ್ಕಳ ಬಗ್ಗೆ ಅಧ್ಯಯನ ನಡೆಸಲಾಗಿದೆ.

Trending News