Kabzaa:ಬಿಗ್‌ ಸರ್ಪ್ರೈಸ್‌ ನೀಡಿದ 'ಕಬ್ಜ' ಟೀಂ.. ಕಿಚ್ಚ ಸುದೀಪ್‌ಗೆ ಇವರೇ ನಾಯಕಿ!

Kabzaa: 'ಕಬ್ಜ' (Kabzaa) ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. 'ಕಬ್ಜ' ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಭಾರತವೇ ಕಾಯುತ್ತಿದೆ. 

Written by - Malathesha M | Edited by - Chetana Devarmani | Last Updated : Mar 7, 2022, 05:16 PM IST
  • 'ಕಬ್ಜ' ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ
  • 'ಕಬ್ಜ' ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಭಾರತವೇ ಕಾಯುತ್ತಿದೆ
  • ಚಿತ್ರತಂಡ ಬಿಗ್‌ ಅಪ್‌ಡೇಟ್‌ ನೀಡಿದೆ
Kabzaa:ಬಿಗ್‌ ಸರ್ಪ್ರೈಸ್‌ ನೀಡಿದ 'ಕಬ್ಜ' ಟೀಂ.. ಕಿಚ್ಚ ಸುದೀಪ್‌ಗೆ ಇವರೇ ನಾಯಕಿ! title=
ಕಬ್ಜ

'ಕಬ್ಜ' (Kabzaa) ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. 'ಕಬ್ಜ' ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಭಾರತವೇ ಕಾಯುತ್ತಿದೆ. ಯಾಕಂದ್ರೆ ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ ನಟರು ಇದ್ದು, ರಿಯಲ್‌ ಸ್ಟಾರ್‌ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್‌ ಮಿಂಚಲಿದ್ದಾರೆ. ಹೀಗಾಗಿ ಕೋಟಿ ಕೋಟಿ ಫ್ಯಾನ್ಸ್‌ 'ಕಬ್ಜ' ರಿಲೀಸ್‌ ಯಾವಾಗ ಅಂತಾ ಕಾಯುತ್ತಿದ್ದಾರೆ. ಈ ಹೊತ್ತಲ್ಲೇ ಚಿತ್ರತಂಡ ಬಿಗ್‌ ಅಪ್‌ಡೇಟ್‌ ನೀಡಿದ್ದು, ಸುದೀಪ್‌ ಅಭಿಮಾನಿಗಳ ದಿಲ್‌ ಖುಷ್‌ ಆಗಿದೆ.

ಇದನ್ನೂ ಓದಿ: ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ: ಮುಂದಿನ ಸಿನಿಮಾ ಯಾವುದು..?

ಅಂದಹಾಗೆ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್‌ ನಲ್ಲಿ 'ಕಬ್ಜ' ಸೆಟ್ಟೇರಿರುವುದು ಗೊತ್ತಿರುವ ವಿಚಾರ. ಆದರೆ ಈ ಸಿನಿಮಾದಲ್ಲಿ ನಾಯಕಿ ಸ್ಥಾನ ಅಲಂಕರಿಸೋದು ಯಾರು..? ಎಂಬ ಪ್ರಶ್ನೆಗೆ ಇದೀಗ ಉತ್ತರ ನೀಡಿದೆ ಚಿತ್ರತಂಡ. ನಿರ್ದೇಶಕ ಆರ್.‌ಚಂದ್ರು ಈ ಕುರಿತು ಬಿಗ್‌ ಅಪ್‌ಡೇಟ್‌ ನೀಡಿದ್ದು, ಕಿಚ್ಚ ಸುದೀಪ್‌ ಹಾಗೂ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿಮಾನಿ ಬಳಗಕ್ಕೆ ಬಿಗ್‌ ಗಿಫ್ಟ್‌ ಸಿಕ್ಕಂತಾಗಿದೆ.

'ಕಬ್ಜ' ಅಖಾಡಕ್ಕೆ ಶ್ರಿಯಾ: ಶ್ರಿಯಾ ಸರಣ್ 'ಕಬ್ಜ' ಅಖಾಡಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ. ಆದರೆ 
'ಕಬ್ಜ' ಸಿನಿಮಾದಲ್ಲಿ ಇಬ್ಬರು ಸ್ಟಾರ್‌ ನಟರು ಅಭಿನಯಿಸುತ್ತಿದ್ದು, ಈ ಪೈಕಿ ಒಬ್ಬ ನಾಯಕಿ ಹೆಸರು ಮಾತ್ರ ರಿವೀಲ್‌ ಆಗಿದೆ. ಆದರೆ ಇನ್ನೊಬ್ಬ ನಾಯಕಿ ಯಾರು ಅನ್ನೋ ವಿಚಾರ ಇನ್ನೂ ತಿಳಿಸಿಲ್ಲ. ಹೀಗಾಗಿ ನಟ ಉಪೇಂದ್ರ ಹಾಗೂ ಸುದೀಪ್‌ ಅವರಿಗೆ ಯಾರು ಯಾರು ನಾಯಕಿ ಅನ್ನೋ ಪ್ರಶ್ನೆ ಕಾಡತೊಡಗಿದೆ.

ಇದನ್ನೂ ಓದಿ: Viral Video: ರಣವೀರ್ ಸಿಂಗ್ ಕಾಲು ಹಿಡಿದ ರಾಖಿ ಸಾವಂತ್ ಮಾಡಿದ್ದೇನು..?

ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ಗೆ 20 ದಿನಗಳ ಕಾಲ್ ಶೀಟ್ ಕೊಟ್ಟಿರುವ ಶ್ರಿಯಾ ಸರಣ್ (Shriya Saran), ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯುಸಿ ಶೂಟಿಂಗ್‌ ನಡುವೆ ಕನ್ನಡ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಮೂಲಕ ಸ್ಯಾಂಡಲ್‌ ವುಡ್‌ಗೆ ಶ್ರಿಯಾ ಸರಣ್ ಕಂಬ್ಯಾಕ್‌ ಮಾಡಿದ್ದಾರೆ. ಮತ್ತೊಂದೆಡೆ ಇನ್ನೊಬ್ಬ ಹೀರೋಯಿನ್‌ ಯಾರು ಅಂತಾ ಅಭಿಮಾನಿಗಳು ಪ್ರಶ್ನೆಗಳ ಸಾಗರದಲ್ಲಿ ಮುಳುಗಿದ್ದಾರೆ. ಈ ಮೂಲಕ  'ಕಬ್ಜ' ಕುತೂಹಲದ ಕಣಜವಾಗಿದ್ದು, ಮತ್ತಷ್ಟು ಅಪ್‌ಡೇಟ್‌ ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News