"ನೀವೆಲ್ಲ ನೋಡಿದ್ದು ಕಾಂತಾರ 2, ಮುಂದೆ ಬರೋದು ಕಾಂತಾರ 1": ತಲೆಗೆ ಹುಳ ಬಿಟ್ಟ ರಿಷಬ್ ಶೆಟ್ಟಿ

Rishab Shetty about Kantara 2 : ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಬಹಳ ದಿನಗಳ ಹಿಂದೆಯೇ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್  ಖಚಿತಪಡಿಸಿದ್ದರು. ನಿರ್ದೇಶಕ ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ. 

Written by - Chetana Devarmani | Last Updated : Feb 6, 2023, 08:11 AM IST
  • ನೀವೆಲ್ಲ ನೋಡಿದ್ದು ಕಾಂತಾರ 2
  • ಮುಂದೆ ಬರೋದು ಕಾಂತಾರ 1
  • ತಲೆಗೆ ಹುಳ ಬಿಟ್ಟ ರಿಷಬ್ ಶೆಟ್ಟಿ
"ನೀವೆಲ್ಲ ನೋಡಿದ್ದು ಕಾಂತಾರ 2, ಮುಂದೆ ಬರೋದು ಕಾಂತಾರ 1": ತಲೆಗೆ ಹುಳ ಬಿಟ್ಟ ರಿಷಬ್ ಶೆಟ್ಟಿ  title=
Rishab Shetty

Rishab Shetty On Kantara 2 : ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಬಹಳ ದಿನಗಳ ಹಿಂದೆಯೇ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ಖಚಿತಪಡಿಸಿದ್ದರು. ನಿರ್ದೇಶಕ ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಶತದಿನೋತ್ಸವ ಸಂಭ್ರಮದಲ್ಲಿ ಈ ಬಗ್ಗೆ ರಿಷಬ್ ಹೇಳಿದ್ದು, ಎಲ್ಲರಿಗೂ ಆಶ್ಚರ್ಯವಾಗಿದೆ. ಯಾವುದೇ ಸಿನಿಮಾದ ಭಾಗ 2 ಎಂದರೆ ಅಂದರೆ ಅದು ಕಥೆಯ ಮುಂದುವರೆದ ಭಾಗವನ್ನು ಹೇಳುತ್ತದೆ. ಆದರೆ ಕಾಂತಾರ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಕಾಂತಾರ ಸೀಕ್ವೆಲ್ ಬದಲು ರಿಷಬ್‌ ಶೆಟ್ಟಿ ಪ್ರೀಕ್ವೆಲ್ ಹೇಳಲು ಹೊರಟಿದ್ದಾರೆ.  

ಇದನ್ನೂ ಓದಿ : ದಳಪತಿ ವಿಜಯ್‌ 67ನೇ ಸಿನಿಮಾಕ್ಕೆ ಲಿಯೋ ಶೀರ್ಷಿಕೆ ಫಿಕ್ಸ್‌..!

ಕಾಂತಾರ 100 ದಿನಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಕಾಂತಾರ 2 ಖಂಡಿತವಾಗಿಯೂ ತಯಾರಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ. ಈ ಸಿನಿಮಾ ಅಂತರಾಷ್ಟ್ರೀಯಮಟ್ಟಕ್ಕೆ ಹೋಗಲು ಕಾರಣ ಪ್ರೇಕ್ಷಕರು. ಅವರನ್ನು ಮರೆಯುವಂತಿಲ್ಲ. ಎಲ್ಲರಿಗೂ ಧನ್ಯವಾದ. ಮಾಧ್ಯಮ ಹಾಗೂ ನಮ್ಮ ತಂಡದ ಎಲ್ಲರ ಸಹಕಾರದಿಂದ ಇಷ್ಟು ದೊಡ್ಡಮಟ್ಟಕ್ಕೆ ಸಿನಿಮಾ ತಲುಪಿದೆ. ಕಾಂತಾರ - 2 ಯಾವಾಗ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ನೀವು ನೋಡಿರೋ ಸಿನಿಮಾನೇ ಕಾಂತಾರ ಪಾರ್ಟ್ 2. ಅತಿ ಶೀಘ್ರದಲ್ಲೇ  ಕಾಂತಾರ ಪಾರ್ಟ್‌ - 1 ಬರುತ್ತದೆ. ಅಷ್ಟು ಮಾತ್ರ ಈಗ ನಾನು ಹೇಳಬಹುದು ಎಂದು ರಿಷಬ್‌ ಹೇಳಿದ್ದಾರೆ. 

ಸಿನಿ ಅಭಿಮಾನಿಗಳು ಕಾಂತಾರ 2 ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.  ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಸಿನಿಮಾ ಸದ್ಯ ಆಸ್ಕರ್‌ ರೇಸ್‌ನಲ್ಲಿದೆ. ಹಲವು ದಾಖಲೆಗಳನ್ನು ಕಾಂತಾರ ಸಿನಿಮಾ ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. 

ಇದನ್ನೂ ಓದಿ : Weekend With Ramesh : ಜೀ ʼವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ..! ಫಸ್ಟ್‌ ಗೆಸ್ಟ್‌ ಯಾರು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News