Bigg Boss: ಗಾಸಿಪ್‌ ಬೇಡ.. ನಾವು ಬಿಗ್‌ಬಾಸ್‌ಗೆ ಹೋಗ್ತಿಲ್ಲ: ಕ್ಲಾರಿಟಿ ಕೊಟ್ಟ ತಾರೆಯರಿವರು

Bigg Boss Kannada Season 10 : ಈ ನಡುವೆ ಬಿಗ್‌ ಬಾಸ್‌ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಆದರೆ ಕೆಲವು ತಾರೆಯರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  

Written by - Chetana Devarmani | Last Updated : Oct 8, 2023, 11:26 AM IST
  • ಇಂದಿನಿಂದ ಶುರುವಾಗಲಿದೆ ಕಿರುತೆರೆ ಹಬ್ಬ
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಕ್ಕೆ ಕ್ಷಣಗಣನೆ
  • ಬಿಗ್‌ ಬಾಸ್‌ಗೆ ಬರ್ತಿಲ್ಲ ಈ ತಾರೆಯರು
Bigg Boss: ಗಾಸಿಪ್‌ ಬೇಡ.. ನಾವು ಬಿಗ್‌ಬಾಸ್‌ಗೆ ಹೋಗ್ತಿಲ್ಲ: ಕ್ಲಾರಿಟಿ ಕೊಟ್ಟ ತಾರೆಯರಿವರು  title=

Bigg Boss Kannada 10 : ಬಿಗ್‌ ಬಾಸ್‌ ಕನ್ನಡ ಹೊಸ ಸೀಸನ್‌ ಇಂದಿನಿಂದ ಶುರುವಾಗಲಿದೆ. ಇನ್ನೇನು ಕೆಲವೇ ಗಂಟೆ ಬಾಕಿ ಉಳಿದಿವೆ. ಈ ನಡುವೆ ಬಿಗ್‌ ಬಾಸ್‌ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಆದರೆ ಕೆಲವು ತಾರೆಯರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಬಿಗ್‌ ಬಾಸ್‌ಗೆ ಹೋಗ್ತಿಲ್ಲ ಎಂದು ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. 

ಇದನ್ನೂ ಓದಿ : ನಿರ್ದೇಶಕ ಯೋಗರಾಜ್ ಭಟ್ ಧ್ವನಿಯಲ್ಲಿ ʼಆಪಲ್ ಕಟ್ʼ ಚಿತ್ರದ ಟೀಸರ್..! 

ಭಾನುವಾರ ಸಂಜೆ ಅದ್ದೂರಿ ಚಾಲನೆ ಸಿಗಲಿದೆ. ಅಲ್ಲಿಂದ ನೂರು ದಿನಗಳ ಕಿರುತೆರೆ ಹಬ್ಬ ಶುರುವಾಗಲಿದೆ. ಕನ್ನಡತಿ ಸೀರಿಯಲ್‌ ನಟಿ ರಂಜನಿ ರಾಘವನ್‌ ಈ ಸಲದ ಬಿಗ್‌ ಬಾಸ್‌ ಬರುತ್ತಾರೆ ಎಂಬ ಮಾತಿತ್ತು. ಆದರೆ ಇದೀಗ ಸ್ವತಃ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ. ನಾನು ಬಿಗ್‌ಬಾಸ್‌ಗೆ ಹೋಗ್ತಿಲ್ಲ. ಸುಳ್ಳು ಸುದ್ದಿ!! ಎಂದು ಸ್ಪಷ್ಟನೆ ನೀಡಿದ್ದಾರೆ.

ಅಗ್ನಿ ಸಾಕ್ಷಿ ಸೀರಿಯಲ್‌ ಖ್ಯಾತಿಯ ನಟ ರಾಜೇಶ್‌ ಧ್ರುವ ಸಹ ನಾನು ಬಿಗ್‌ಬಾಸ್‌ಗೆ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಸಹ ಬಿಗ್‌ಬಾಸ್‌ ಸೀಸನ್‌ 10ರಲ್ಲಿ ನಾವಿರುವುದಿಲ್‌ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. 

ಇದನ್ನೂ ಓದಿ : ಈತನೇ ಬಾಲಿವುಡ್’ನ 'ಮೋಸ್ಟ್ ಫ್ಲಾಪ್' ನಟ…! ನಟಿಸಿದ 180 ಸಿನಿಮಾವೂ ಕಂಪ್ಲೀಟ್ ಫೈಲ್ಯೂರ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News