ಅಶ್ವಿನಿ ಪುನೀತ್ ಹಿಂದೆ ಬಿದ್ದಿದ್ದಾರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು..! ಯಾಕೆ ಗೊತ್ತಾ..?

Ashwini Puneeth Rajkumar: ಅಣ್ಣಾವ್ರ ನಂತರ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಲ್ಲಿ ಡಾ.. ರಾಜ್​ಕುಮಾರ್​ ಅವರನ್ನು ಕಂಡ ಅಭಿಮಾನಿಗಳು ಅಣ್ಣಾವ್ರಿಗೆ ಕೊಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನು ಅಪ್ಪುಗೆ ಧಾರೆ ಎರೆದಿದ್ರು.. ಅಪ್ಪುವನ್ನ ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆದರೂ ಅಪ್ಪು ಇದ್ಯಾವುದಕ್ಕೂ ಒಪ್ಪಲಿಲ್ಲ. ಇನ್ನು ಅಪ್ಪು ಅಗಲಿಕೆ ನಂತ್ರ ದೊಡ್ಮನೆ ದೇವರುಗಳು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಲ್ಲೇ ಅಪ್ಪು ಅವರನ್ನು ಕಾಣುತ್ತಿದ್ದಾರೆ. 

Written by - YASHODHA POOJARI | Edited by - Yashaswini V | Last Updated : Dec 9, 2022, 11:39 AM IST
  • ಡಾ. ರಾಜ್​ಕುಮಾರ್​ ಕನ್ನಡದ ಮೇರು ನಟ..
  • ಅಣ್ಣಾವ್ರು ವ್ಯಕ್ತಿ ಅಲ್ಲ ಒಂದು ಶಕ್ತಿ ಅನ್ನೋದು ಗೋಕಾಕ್​ ಚಳುವಳಿಯಲ್ಲಿ ಎಲ್ಲರಿಗೂ ಗೊತ್ತಾಯಿತು.
  • ಅಣ್ಣಾವ್ರು ಯಾವತ್ತೂ ರಾಜಕೀಯದ ಕಡೆ ನೋಡಲಿಲ್ಲ.. ಅಭಿಮಾನಿಗಳ ಪ್ರೀತಿಯನ್ನು ವೋಟಾಗಿಸಿ ಕೊಳ್ಳೋದಕ್ಕೆ ಒಪ್ಪಲಿಲ್ಲ..
ಅಶ್ವಿನಿ ಪುನೀತ್ ಹಿಂದೆ ಬಿದ್ದಿದ್ದಾರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು..! ಯಾಕೆ ಗೊತ್ತಾ..? title=
ರಾಜಕೀಯಕ್ಕೆ ಬರ್ತಾರಾ ಅಶ್ವಿನಿ ಪುನೀತ್ ರಾಜ್ ಕುಮಾರ್..!

Ashwini Puneeth Rajkumar: ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯ ಎಂಟ್ರಿ ಪಕ್ಕನಾ ಅನ್ನೋ ಪ್ರಶ್ನೆ ಇದೀಗ ಬಹಳಷ್ಟು ಚರ್ಚೆ ಆಗುತ್ತಿದೆ. ಅಪ್ಪು ಹಾದಿಯಲ್ಲೇ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸಾಗುವ ಮೂಲಕ ದೊಡ್ಮನೆ ಗೌರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಡಾ. ರಾಜ್​ಕುಮಾರ್​ ಕನ್ನಡದ ಮೇರು ನಟ.. ಅಣ್ಣಾವ್ರು ವ್ಯಕ್ತಿ ಅಲ್ಲ ಒಂದು ಶಕ್ತಿ ಅನ್ನೋದು ಗೋಕಾಕ್​ ಚಳುವಳಿಯಲ್ಲಿ ಎಲ್ಲರಿಗೂ ಗೊತ್ತಾಯಿತು. ಇಡೀ ಅಣ್ಣಾವ್ರ ಕುಟುಂಬ ಸರಳತೆಯಿಂದಲೇ ಬದುಕುತ್ತಿದ್ದಾರೆ. ಅಣ್ಣಾವ್ರು ಯಾವತ್ತೂ ರಾಜಕೀಯದ ಕಡೆ ನೋಡಲಿಲ್ಲ.. ಅಭಿಮಾನಿಗಳ ಪ್ರೀತಿಯನ್ನು ವೋಟಾಗಿಸಿ ಕೊಳ್ಳೋದಕ್ಕೆ ಒಪ್ಪಲಿಲ್ಲ.. ಅಲ್ಲದೆ ಅಣ್ಣಾವ್ರಿಗೆ ಬಂದ ರಾಜಕೀಯದ ಅಫರ್​ಗಳನ್ನು ನಯವಾಗಿ ತಿರಸ್ಕರಿಸಿ ತನ್ನ ಅಭಿಮಾನಿ ದೇವರುಗಳ ಹೃದಯಗೆದ್ದ ದೇವಾತ ಮನುಷ್ಯ. 

ಇದನ್ನೂ ಓದಿ- Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ಯಾವುದು? ಅದರ ಬೆಲೆ ಎಷ್ಟು ಗೊತ್ತಾ?

ಇದಲ್ಲದೆ ಅಣ್ಣಾವ್ರ ನಂತರ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಲ್ಲಿ ಡಾ.. ರಾಜ್​ಕುಮಾರ್​ ಅವರನ್ನು ಕಂಡ ಅಭಿಮಾನಿಗಳು ಅಣ್ಣಾವ್ರಿಗೆ ಕೊಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನು ಅಪ್ಪುಗೆ ಧಾರೆ ಎರೆದಿದ್ರು.. ಅಪ್ಪುವನ್ನ ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆದರೂ ಅಪ್ಪು ಇದ್ಯಾವುದಕ್ಕೂ ಒಪ್ಪಲಿಲ್ಲ. ಇನ್ನು ಅಪ್ಪು ಅಗಲಿಕೆ ನಂತ್ರ ದೊಡ್ಮನೆ ದೇವರುಗಳು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಲ್ಲೇ ಅಪ್ಪು ಅವರನ್ನು ಕಾಣುತ್ತಿದ್ದಾರೆ. ಅಪ್ಪುಗೆ ತೋರಿದ್ದ ಅಭಿಮಾನ ಪ್ರೀತಿಯನ್ನು ಕೊಟ್ಟಿದ್ದಾರೆ.. ಅಲ್ಲದೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕೂಡ ತಮ್ಮ ಮಾವ ಡಾ.ರಾಜ್​ ಕುಮಾರ್​ ಅತ್ತೆ ಪಾರ್ವತಮ್ಮ, ಪತಿ ಪುನೀತ್​ ರಾಜ್​ಕುಮಾರ್​ ಅವರ ಹಾದಿಯಲ್ಲೇ ಸಾಗುವ ಮೂಲಕ ಜನಮನಗೆದ್ದಿದ್ದಾರೆ. 

ಇದನ್ನೂ ಓದಿ- ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌

ಇದಲ್ಲದೆ ಅಪ್ಪು ನಿಧನದ ನಂತರ ದೊಡ್ಮನೆ ಅಭಿಮಾನಿಗಳು ಹಾಗೂ ಕನ್ನಡಿಗರು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ  ತೋರುತ್ತಿರುವ ಪ್ರೀಯನ್ನು ಮನಗಂಡಿರುವ ರಾಜಕೀಯ ಪಕ್ಷಗಳು ( ಬಿಜೆಪಿ, ಕಾಂಗ್ರೇಸ್, ಮತ್ತು ಜೆಡಿಎಸ್​)  ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರನ್ನು ಏನಾದ್ರು ಮಾಡಿ ತಮ್ಮ ಪಕ್ಷಕ್ಕೆ ಕರೆತಂದು ಜನರ ಪ್ರೀತಿಯನ್ನ ವೋಟ್​ ಬ್ಯಾಂಕ್​ ಮಾಡಿಕೊಳ್ಳಲ್ಲು ಪ್ರಯತ್ನ ಮಾಡಿವೆ. ಆದರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ, ಅಣ್ಣಾವ್ರು ಮತ್ತು ಅಪ್ಪು ಸಾಗಿದ್ದ ಹಾದಿಯಲ್ಲೇ ಸಾಗಿ  ರಾಜಕೀಯಕ್ಕೆ ಬರೋದಿಲ್ಲ ಅಂತ ರಾಜಕೀಯದಿಂದ ದೂರ ಉಳಿದು ದೊಡ್ಮನೆ ಗೌರವ ಮತ್ತು ಅಭಿಮಾನಿಗಳ ಪ್ರೀತಿ ಎರಡಕ್ಕೂ ದಕ್ಕೆ ಬಾರದಂತೆ ದೊಡ್ಡ ನಿರ್ಧಾರ ತೆಗೆದು ಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News