Kantara : ʻಕಾಂತಾರʼ ಬಿಗ್ ಸಕ್ಸಸ್ ಸೆಲೆಬ್ರೇಶನ್.. ಭಾನುವಾರ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಫಿಕ್ಸ್.!

Kantara Success meet : ಕಾಂತಾರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಅಕ್ಕ ಪಕ್ಕದ ಸಿನಿ ದುಬಿಯಾದಲ್ಲೂ ತನ್ನದೆ ಆದ ಟ್ರೇಡ್ ಮಾರ್ಕ್ ಕ್ರಿಯೇಟ್ ಮಾಡಿರೋ ಚಿತ್ರ...ಈಗಾಗಲೇ 100 ದಿನಗಳ ಪೂರೈಸಿರೋ ಕಾಂತಾರ‌ ಹೊಂಬಾಳೆ ಫಿಲಂಸ್ ನ ಹೆಮ್ಮೆಯ ಸಿನಿಮಾಗಳಲ್ಲಿ ಒಂದು.

Written by - YASHODHA POOJARI | Last Updated : Feb 4, 2023, 11:30 AM IST
  • ಈಗಾಗಲೇ 100 ದಿನಗಳ ಪೂರೈಸಿರೋ ಕಾಂತಾರ‌
  • ʻಕಾಂತಾರʼ ಬಿಗ್ ಸಕ್ಸಸ್ ಸೆಲೆಬ್ರೇಶನ್
  • ಭಾನುವಾರ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಫಿಕ್ಸ್.!
Kantara : ʻಕಾಂತಾರʼ ಬಿಗ್ ಸಕ್ಸಸ್ ಸೆಲೆಬ್ರೇಶನ್.. ಭಾನುವಾರ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಫಿಕ್ಸ್.! title=
Kantara

Kantara Success meet : ಕಾಂತಾರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಅಕ್ಕ ಪಕ್ಕದ ಸಿನಿ ದುಬಿಯಾದಲ್ಲೂ ತನ್ನದೆ ಆದ ಟ್ರೇಡ್ ಮಾರ್ಕ್ ಕ್ರಿಯೇಟ್ ಮಾಡಿರೋ ಚಿತ್ರ...ಈಗಾಗಲೇ 100 ದಿನಗಳ ಪೂರೈಸಿರೋ ಕಾಂತಾರ‌ ಹೊಂಬಾಳೆ ಫಿಲಂಸ್ ನ ಹೆಮ್ಮೆಯ ಸಿನಿಮಾಗಳಲ್ಲಿ ಒಂದು.. ಈಗ ಈ ಹೆಮ್ಮೆಯ ಕಾಂತಾರ ಚಿತ್ರಕ್ಕೆ ಅಪ್ಪು ಅಭಿನಯದ ರಾಜಕುಮಾರ ಚಿತ್ರಕ್ಕೆ ಸಲ್ಲಿಸಿದ ಗೌರವವನ್ನು ಸಲ್ಲಿ ಸೋಕೆ ಹೊಂಬಾಳೆ ಬಳಗ ಸಕತ್ ತಯಾರಿ ಮಾಡಿ ಕೊಳ್ತಿದ್ದಾರೆ.

ಡಿಜಿಟಲ್ ಯುಗ ಬಂದಮೇಲೆ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ..ನೂರುದಿನಗಳಲ್ಲಿ ಕಲೆಕ್ಷನ್ ಮಾಡ್ತಿದ್ದ ಹಣವನ್ನು ಮೂರೇ ದಿನಗಳಲ್ಲಿ ಬಾಚಿಕೊಳ್ತಿವೆ..ಅದರೆ ನೂರು ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದ್ದ ಸಿನಿಮಾಗಳು ಈಗ ಮೂರು ವಾರಕ್ಕೆ ಥಿಯೇಟರ್ ನಲ್ಲಿ ಕಾಣೆಯಾಗಿರ್ತಾವೆ..ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾಗಳು ಕೂಡ ಸಿನಿಮಾ ದೇವಾಲಯ ಚಿತ್ರಮಂದಿರಗಳಲ್ಲಿ ಪ್ರೇಕ್ಷಕಪ್ರಭುಗಳಿಗೆ ನೂರು ದಿನ ದರ್ಶನ ಕೊಡೊದಿಲ್ಲ.ಇಂತ ಪರಿಸ್ಥಿತಿಯಲ್ಲಿ ಕನ್ನಡದ ಹೆಮ್ಮೆಯ ಕಾಂತಾರ ಚಿತ್ರ ಚಿತ್ರಮಂದಿರಗಳಲ್ಲಿ ನೂರುದಿನಗಳನ್ನು ಪೂರೈಸಿ ನಾನೂರು ಕೋಟೆಯನ್ನು ಗಳಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಸಪ್ತಸಾಗರದಾಚೆಗೂ ಪಸರಿಸಿದೆ.

ಇದನ್ನೂ ಓದಿ : Bigg Boss ಸ್ಪರ್ಧಿಗೆ ಬಟ್ಟೆ ಬಿಚ್ಚುವಂತೆ ಖ್ಯಾತ ನಿರ್ದೇಶಕನ ಟಾರ್ಚರ್‌.!

ಕನ್ನಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟ್ರು ರಿಷಬ್ ಶೆಟ್ಟಿನ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಡಿವೈನ್ ಸ್ಟಾರ್ ಮಾಡಿದ ಸಿನಿಮಾ ಕಾಂತಾರ. ಚಿತ್ರತಂಡದ ನಿರೀಕ್ಷೆಯನ್ನು ಮೀರಿ, ನಮ್ಮ ನಾಡು ನುಡಿ ಗಡಿಯಾಚೆಗೆ ಹೊಸ‌ದಾರಿ ಸೃಷ್ಠಿಸಿದ ಕನ್ನಡದ ಕಾಂತಾರ ಹೌಸ್ ಫುಲ್ ಪ್ರದರ್ಶನದಲ್ಲಿ ಭರ್ಜರಿ ನೂರು ದಿನಗಳ ಪೂರೈಸಿದೆ.ಈಗ ಈ ಸಂಭ್ರಮವನ್ನು ಕಾಂತಾರ ಬಳಗದ ಜೊತೆ ಸೆಲೆಬ್ರೇಶನ್ ಮಾಡಿ..ಚಿತ್ರಕ್ಕಾಗಿ ಶ್ರಮಿಸಿದವರಿಗೆ ಗೌರವಸಲ್ಲಿಸೋಕೆ ಹೊಂಬಾಳೆ ಫಿಲಂಸ್ ಪಕ್ಕಾ ಪ್ಲಾನ್ ಮಾಡಿಕೊಂಡಿದೆ.

ಹೊಂಬಾಳೆ ಫಿಲಂಸ್ ಕಳೆದ ನಾಲ್ಕು ವರ್ಷಗಳಿಂದ ಮುಟ್ಟಿದ್ದೆಲ್ಲ ಚಿನ್ನವಾಗಿದೆ‌‌..ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಕನ್ನಡಿಗರ ಮನಸ್ಸು ಗೆದ್ದು ಕೋಟಿ ಕೋಟಿ ಗಳಿಸಿ ನೂರು ದಿನಗಳು ಯಶಸ್ವಿ ಪ್ರದರ್ಶನ ಕಂಡಿತ್ತು. ಇದಾದ ನಂತ್ರ ಹೊಂಬಾಳೆಯ ಕೆಜಿಎಫ್ ಸಿನಿಮಾ ಸಾವಿರಾರು ಕೋಟಿಗಳಿಸಿ  ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಬಾವುಟ ಹಾರಿಸಿತ್ತು..ಇದಾದ ನಂತ್ರ ಕಾಂತಾರ ಚಿತ್ರ ಇಂಡಿಯನ್ ಫಿಲ್ಮ್ ಇಂಡಸ್ರ್ಟಿಯಲ್ಲಿ ರೆವಲ್ಯೂಶನ್ ಕ್ರಿಯೇಟ್ ಮಾಡಿದ್ದು, ಈಗ ಈ ಚಿತ್ರಕ್ಕೆ ಹೊಂಬಾಳೆ ಬಳಗ ರಾಜಕುಮಾರ ಚಿತ್ರಕ್ಕೆ ಸಲ್ಲಿಸಿದ್ದ ದೊಡ್ಡ ಗೌರವ
ಸಲ್ಲಿಸೋಕೆ ನಿರ್ಧರಿಸಿದ್ದಾರೆ.‌

ಕಳೆದ ವರ್ಷ ಸೆಪ್ಟೆಂಬರ್ 30 ಕ್ಕೆ ರಾಜ್ಯಾದ್ಯಂತ ರಿಲೀಸ್

ಆಗಿ ನಂತ್ರ ಎಲ್ಲಾ ಭಾಷೆಗಳಿಗೂ ಟ್ರಾವೆಲ್ ಮಾಡಿದ ಕಾಂತಾರ ಯಶಸ್ವಿ ನೂರುದಿನಗಳ ಕಂಪ್ಲೀಟ್ ಮಾಡಿದೆ‌. ವಾರಕ್ಕೆ 10 ರಿಂದ 20 ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುವ ಈ ಕಾಂಪಿಟೇಶನ್ ಯುಗದಲ್ಲಿ. ಮೂರು ವಾರ ಚಿತ್ರಮಂದಿರಗಳಲ್ಲಿ ಉಳಿದು ಕೊಳ್ಳಲು ಸಾಹಸ ಮಾಡಬೇಕಾದ  ಸಂಧರ್ಭದಲ್ಲಿ  ಯಾರ್  ಬಂದ್ರೆ ನನಗೇನು ಅಂತ ಯಾವ ಚಿತ್ರಕ್ಕೂ ಜಗ್ಗದೆ ನೂರು ದಿನಗಳ ಪೂರೈಸಿರುವ ಕಾಂತಾರ ಚಿತ್ರದ ಶತದಿನೋತ್ಸವದ ಸಂಭ್ರಮವನ್ನು ಇದೇ ಫೆ.5 ಅಂದ್ರೆ ಭಾನುವಾರ ಸೆಲೆಬ್ರೇಟ್ ಮಾಡಲು ಹೊಂಬಾಳೆ ಫಿಲಂಸ್ ನೀಲನಕ್ಷೆ ಸಿದ್ದಪಡಿಸಿದೆ. 

ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್ ಮತ್ತು ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು?

ಹೊಂಬಾಳೆ ಫಿಲಂಸ್ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಕಾಂತಾರ ಚಿತ್ರ ತಂಡಕ್ಕೆ ಆತ್ಮೀಯ ಗೌರವ ಸಲ್ಲಿಸಲು ಹೊಂಬಾಳೆ ಫಿಲಂಸ್ ಪ್ಲಾನ್ ಮಾಡಿದೆ‌‌..ಫೆ .5 ಕ್ಕೆ ವಿಜಯನಗರದಲ್ಲಿರು ಬಂಟ್ಸ್ ಸಂಘದಲ್ಲಿ ಅದ್ದೂರಿ ಯಾಗಿ  ಕಾಂತಾರ ಚಿತ್ರದ ನೂರು ದಿನ ಕಂಪ್ಲೀಟ್ ಮಾಡಿದ ಸಂಭ್ರಮವನ್ನು ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿದೆ...ಈ ಮೂಲಕ ಹೊಂಬಾಳೆ ಫಿಲಂಸ್ ನಲ್ಲಿ  ರಾಜಕುಮಾರ ಚಿತ್ರದ ನಂತ್ರ ಶತದಿನೋತ್ಸವ ಆಚರಿಸಿಕೊಳ್ತಿರುವ ಚಿತ್ರ ಎಂಬ ಹೆಗ್ಗಳಿಕೆ ಕಾಂತಾರ ಮುಡಿಗೇರಿದೆ..ಇದೇ ಭಾನುವಾರ ಬಂಟ್ಸ್ ಸಂಘದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಒಂದೇ ವೇದಿಕೆಯಲ್ಲಿ ನಿಂತು ಕಾಂತಾರದ ಗೆಲುವಿನ ಸಿಹಿಯನ್ನು ಸವಿಯಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ  ಸ್ಟಾರ್ ನಟರನ್ನು ಆಹ್ವಾನಿಸಲು ಹೊಂಬಾಳೆ ಫಿಲಂಸ್ ಸಕಲ ಸಿದ್ದತೆ ಮಾಡಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News