Jasmin Bhasin: ಬಿಗ್‌ ಬಾಸ್‌ ಸ್ಪರ್ಧಿಗೆ ಬಟ್ಟೆ ಬಿಚ್ಚುವಂತೆ ಖ್ಯಾತ ನಿರ್ದೇಶಕನ ಟಾರ್ಚರ್‌.!

Jasmin Bhasin on casting couch : ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ ಎಂಬುದು ರಹಸ್ಯವಲ್ಲ ಮತ್ತು ಹಲವಾರು ಪ್ರಸಿದ್ಧ ನಟರು ಸಹ ಈ ಬಗ್ಗೆ ತಮ್ಮ ಆಘಾತಕಾರಿ ಅನುಭವಗಳನ್ನು ವಿವರಿಸಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಜನಪ್ರಿಯ ನಟಿ ಜಾಸ್ಮಿನ್ ಭಾಸಿನ್ ಅವರು ಆಡಿಷನ್‌ನಲ್ಲಿ ಅಸಾಂಪ್ರದಾಯಿಕ ಕಾರ್ಯಗಳನ್ನು ಮಾಡಲು ಕೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. 

Written by - Chetana Devarmani | Last Updated : Feb 4, 2023, 11:27 AM IST
  • ಬಿಗ್‌ ಬಾಸ್‌ ಸ್ಪರ್ಧಿ ಜಾಸ್ಮಿನ್ ಭಾಸಿನ್
  • ಬಟ್ಟೆ ಬಿಚ್ಚುವಂತೆ ಖ್ಯಾತ ನಿರ್ದೇಶಕನ ಟಾರ್ಚರ್‌.!
  • ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಟಿ
Jasmin Bhasin: ಬಿಗ್‌ ಬಾಸ್‌ ಸ್ಪರ್ಧಿಗೆ ಬಟ್ಟೆ ಬಿಚ್ಚುವಂತೆ ಖ್ಯಾತ ನಿರ್ದೇಶಕನ ಟಾರ್ಚರ್‌.! title=
Jasmin Bhasin

Jasmin Bhasin Casting Couch : ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ ಎಂಬುದು ರಹಸ್ಯವಲ್ಲ ಮತ್ತು ಹಲವಾರು ಪ್ರಸಿದ್ಧ ನಟರು ಸಹ ಈ ಬಗ್ಗೆ ತಮ್ಮ ಆಘಾತಕಾರಿ ಅನುಭವಗಳನ್ನು ವಿವರಿಸಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಜನಪ್ರಿಯ ನಟಿ ಜಾಸ್ಮಿನ್ ಭಾಸಿನ್ ಅವರು ಆಡಿಷನ್‌ನಲ್ಲಿ ಅಸಾಂಪ್ರದಾಯಿಕ ಕಾರ್ಯಗಳನ್ನು ಮಾಡಲು ಕೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಜಾಸ್ಮಿನ್ ಭಾರತದಲ್ಲಿನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಬೇಕೆಂದು ಆಸೆಪಟ್ಟಿದ್ದರು. ತನ್ನ ಕನಸಿನ ವೃತ್ತಿಯ ದಿಕ್ಕಿನಲ್ಲಿ ತನ್ನ ಮೊದಲ ಹೆಜ್ಜೆ ಇಡಲು ತುಂಬಾ ಸಂತೋಷಪಟ್ಟರು. ಆದರೆ ಈ ಪ್ರಕ್ರಿಯೆಯಲ್ಲಿ ಚಲನಚಿತ್ರೋದ್ಯಮದ ಕಟುವಾದ ವಾಸ್ತವತೆಯನ್ನು ಎದುರಿಸಬೇಕಾಯಿತು.

ಜಾಸ್ಮಿನ್ ಆಡಿಷನ್ ನಡೆಸುತ್ತಿದ್ದ ನಿರ್ದೇಶಕರು ಬಿಕಿನಿ ಹಾಕಿಕೊಂಡು ಆಡಿಷನ್ ನೀಡುವಂತೆ ಹೇಳಿದರಂತೆ. ಈ ಬೇಡಿಕೆಯನ್ನು ಕೇಳಿದ ನಟಿಗೆ ಆಘಾತವಾಯಿತು. ನಟಿಯಾಗುವ ಮೊದಲ ಹೆಜ್ಜೆಯಲ್ಲಿ ಈ ರೀತಿಯ ಅಸಭ್ಯ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಆದರೂ ಅದನ್ನು ನಿರಾಕರಿಸಿ ಸಂದರ್ಶನದಿಂದ ಹೊರನಡೆದರು.

ಇದನ್ನೂ ಓದಿ : Thunivu Varisu OTT : ʼವಾರಿಸುʼ, ʼತುನಿವುʼ ಓಟಿಟಿ ಬಿಡುಗಡೆ ಡೇಟ್‌ ಫಿಕ್ಸ್‌..! ಎಲ್ಲಿ.. ಯಾವಾಗ..?

ಸಣ್ಣ ಪರದೆಯ ಜನಪ್ರಿಯ ನಟಿಯರಲ್ಲಿ ಜಾಸ್ಮಿನ್ ಭಾಸಿನ್ ಒಬ್ಬರು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯವಾದರು. ಕೆಲವು ವರ್ಷಗಳ ಹಿಂದೆ ತನಾಗದ ಕಾಸ್ಟಿಂಗ್​ ಕೌಚ್​ ಬಗ್ಗೆ ಜಾಸ್ಮಿನ್ ಭಾಸಿನ್ ವಿವರಿಸಿದ್ದಾರೆ. "ಶುರುವಿನಲ್ಲಿ ನಾನು ಸದಾ ಈ ಕ್ಷೇತ್ರದಲ್ಲಿಯೇ ಕೆಲಸ ಮಾಡಬೇಕೆಂದು ಅಂದುಕೊಂಡಿದ್ದೆ. ಹಾಗಾಗಿ ಎಲ್ಲೇ ಆಡಿಷನ್‌ ನಡೆದರೂ ಹೋಗುತ್ತಿದ್ದೆ. ಒಂದು ದಿನ ನಿರ್ದೇಶಕರೊಬ್ಬರು ನನ್ನನ್ನು ಸಂದರ್ಶನಕ್ಕೆ ಕರೆದರು. ಅಲ್ಲಿಗೆ ನಾಣು ಹೋದೆ. ಅವರು ನನ್ನೊಂದಿಗೆ ಮಾತನಾಡಲು ಆರಂಭಿಸಿದರು" ಎಂದಿದ್ದಾರೆ. ಇದಾದ ಬಳಿಕ ನಿರ್ದೇಶಕರು   ಜಾಸ್ಮಿನ್ ಭಾಸಿನ್ ಅವರಿಗೆ ಬಟ್ಟೆ ತೆಗೆಯುವಂತೆ ಹೇಳಿದ್ದರಂತೆ. ಬಿಕಿನಿಯಲ್ಲಿ ಸಂದರ್ಶನ ಕೊಡಲು ತಿಳಿಸಿದರಂತೆ. ಈ ಕಹಿ ಅನುಭವವನು ಜಾಸ್ಮಿನ್ ಭಾಸಿನ್ ಇದೀಗ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್ ಮತ್ತು ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News