Petrol Price Today : ವಾಹನ ಸವಾರರ ಗಮನಕ್ಕೆ : ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ!

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ 100.58 ರೂ. ಮತ್ತು ಡೀಸೆಲ್ ಲೀಟರ್‌ಗೆ 85.01 ರೂ.ಗೆ ಮಾರಾಟವಾಗುತ್ತಿದೆ.

Written by - Zee Kannada News Desk | Last Updated : Feb 9, 2022, 08:11 AM IST
  • ಸರ್ಕಾರಿ ತೈಲ ಕಂಪನಿಗಳು ಬುಧವಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುಗಡೆ
  • ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100.58 ರೂ.
  • ದೆಹಲಿ ಪೆಟ್ರೋಲ್ ಬೆಲೆ 95.41 ರೂ.
Petrol Price Today : ವಾಹನ ಸವಾರರ ಗಮನಕ್ಕೆ : ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ! title=

ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಬುಧವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದು ಬಿಡುಗಡೆಯಾದ ತೈಲ ಬೆಲೆ ಸುಮಾರು ಮೂರು ತಿಂಗಳ ಕಾಲ ಸ್ಥಿರವಾಗಿದೆ. ಕಂಪನಿಗಳು ಪ್ರತಿದಿನ ಬೆಲೆಗಳನ್ನು ಪರಿಸ್ಕರಿಸುತ್ತವೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ 100.58 ರೂ. ಮತ್ತು ಡೀಸೆಲ್ ಲೀಟರ್‌ಗೆ 85.01 ರೂ.ಗೆ ಮಾರಾಟವಾಗುತ್ತಿದೆ.

ಸರ್ಕಾರವು ಜೂನ್ 15, 2017 ರಿಂದ ತೈಲ ಬೆಲೆಗಳನ್ನು ಮಾರುಕಟ್ಟೆಗೆ ಒಳಪಡಿಸಿತ್ತು, ಇದರಿಂದಾಗಿ ಅವುಗಳ ಬೆಲೆಗಳು ಪ್ರತಿದಿನವೂ ನಿಗದಿಯಾಗಲು ಪ್ರಾರಂಭವಾಗಿದೆ. ನವೆಂಬರ್ 4, 2021 ರಂದು, ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ(Petrol Price) 100 ರೂಪಾಯಿಗಿಂತ ಹೆಚ್ಚನ ಬೆಲೆಗೆ ಮಾರಾಟವಾಗುತ್ತಿತ್ತು. ನಂತರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿ ಕಡಿಮೆ ಮಾಡಿತು. ಅಲ್ಲಿಂದೀಚೆಗೆ ಹಲವು ನಗರಗಳಲ್ಲಿ ಪೆಟ್ರೋಲ್ 100 ರೂ.ಗೆ ಇಳಿದಿದೆ. ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರ್‌ಗೆ 95.41 ರೂ. ಮತ್ತು ಡೀಸೆಲ್ ಲೀಟರ್‌ಗೆ 86.67 ರೂ.ಗೆ ಮಾರಾಟವಾಗುತ್ತಿದೆ. ಕಂಪನಿಗಳು ನವೆಂಬರ್ 4 ರಿಂದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದನ್ನೂ ಓದಿ : Petrol Price Today : ಹೊಸ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ ಮಾಡಿದ ತೈಲ ಕಂಪನಿಗಳು : ಇಂದಿನ ಬೆಲೆ ಎಷ್ಟು?

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ

- ದೆಹಲಿ ಪೆಟ್ರೋಲ್ 95.41 ರೂ. ಮತ್ತು ಡೀಸೆಲ್ ಲೀಟರ್‌ಗೆ 86.67 ರೂ.

- ಮುಂಬೈ ಪೆಟ್ರೋಲ್ 109.98 ರೂ. ಮತ್ತು ಡೀಸೆಲ್ ಲೀಟರ್‌ಗೆ 94.14 ರೂ.

- ಚೆನ್ನೈ ಪೆಟ್ರೋಲ್ 101.40 ರೂ. ಮತ್ತು ಡೀಸೆಲ್ ಲೀಟರ್‌(Diesel Price)ಗೆ 91.43 ರೂ.

- ಕೋಲ್ಕತ್ತಾ ಪೆಟ್ರೋಲ್ ಲೀಟರ್‌ಗೆ 104.67 ರೂ. ಮತ್ತು ಡೀಸೆಲ್ 89.79 ರೂ.

- ಬೆಂಗಳೂರು ಪೆಟ್ರೋಲ್ 100.58 ರೂ. ಮತ್ತು ಡೀಸೆಲ್ ಲೀಟರ್‌ಗೆ 85.01 ರೂ.

- ಲಕ್ನೋ ಪೆಟ್ರೋಲ್ 95.29 ರೂ ಮತ್ತು ಡೀಸೆಲ್ ಲೀಟರ್‌ಗೆ 86.81 ರೂ.

- ಪಾಟ್ನಾ ಪೆಟ್ರೋಲ್ 106.26 ರೂ. ಮತ್ತು ಡೀಸೆಲ್ ಲೀಟರ್‌ಗೆ 91.43 ರೂ..

ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತದೆ ಬೆಲೆ 

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Prices) ಬದಲಾಗುತ್ತದೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ : Gold price Today : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಇಂದಿನ ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆ!

ನೀವು ಇಂದಿನ ಬೆಲೆಗಳನ್ನು SMS ಮೂಲಕ ಕೂಡ ತಿಳಿದುಕೊಳ್ಳಬಹುದು

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು (Diesel Petrol Price Daily). ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಬರೆಯುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News