Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆ 150 ರೂ.ವರೆಗೆ ಏರಿಕೆ ಸಾಧ್ಯತೆ!

ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಲಾಗಿದೆ.

Written by - Channabasava A Kashinakunti | Last Updated : Oct 27, 2021, 03:33 PM IST
  • ಬ್ರೆಂಟ್ ಕಚ್ಚಾ ತೈಲವು ದುಬಾರಿಯಾಗುವುದರಿಂದ ಬೆಲೆ ಹೆಚ್ಚಾಗುತ್ತದೆ
  • ಪೆಟ್ರೋಲ್, ಡೀಸೆಲ್ ಬೆಲೆಗೆ ಭಾರಿ ಪರಿಣಾಮ
  • ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆ 150 ರೂ.ವರೆಗೆ ಏರಿಕೆ ಸಾಧ್ಯತೆ! title=

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಲಾಗಿದೆ.

ಬ್ರೆಂಟ್ ಕಚ್ಚಾ ತೈಲವು ದುಬಾರಿಯಾಗಿರುವುದರಿಂದ ಬೆಲೆ ಹೆಚ್ಚಾಗುತ್ತದೆ

ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 110 ಕ್ಕೆ ಏರಬಹುದು ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಇತ್ತೀಚಿನ ಟಿಪ್ಪಣಿಯಲ್ಲಿ ಹೇಳಿದೆ. ಪ್ರಸ್ತುತ, ಬ್ರೆಂಟ್ ಕಚ್ಚಾ ತೈಲದ ಬೆಲೆ(Crowd Oil Price) ಪ್ರತಿ ಬ್ಯಾರೆಲ್‌ಗೆ $ 85 ರಷ್ಟಿದೆ. ಹೀಗಾಗಿ, ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಈಗಿನ ಬೆಲೆಗೆ ಹೋಲಿಸಿದರೆ ಮುಂದಿನ ವರ್ಷದ ವೇಳೆಗೆ ಶೇ.30 ರಷ್ಟು ಹೆಚ್ಚಾಗಬಹುದು. ಜಾಗತಿಕ ಬೇಡಿಕೆ-ಪೂರೈಕೆಯು ಅಸಮತೋಲನಗೊಂಡಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ತೈಲ ವಿಶ್ಲೇಷಕರು ಹೇಳುತ್ತಾರೆ. ಈ ಸಮಯದಲ್ಲಿ ಕಚ್ಚಾ ಬೇಡಿಕೆಯು ಕೋವಿಡ್ ಪೂರ್ವದ ಮಟ್ಟವನ್ನು ತಲುಪಿದೆ. ಇದರಿಂದ ಮುಂದಿನ ವರ್ಷ ಕಚ್ಚಾತೈಲ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Indian Railways Alert: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡದ ಜೊತೆಗೆ 3 ವರ್ಷ ಜೈಲು ಶಿಕ್ಷೆ

ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ದೊಡ್ಡ ಪರಿಣಾಮ

ಕಚ್ಚಾ ತೈಲ ಬೆಲೆಯ ಹೆಚ್ಚಳವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ(Petrol-Diesel Price) ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಗೋಲ್ಡ್‌ಮನ್ ಸ್ಯಾಚ್ಸ್ ಹೇಳುವಂತೆ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಎಂದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 140 ರೂ. ಪ್ರಸ್ತುತ, ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 107.94 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 96.97 ರೂ.

ಕಚ್ಚಾ ಬೇಡಿಕೆ ಹೆಚ್ಚಲಿದೆ

ಜಾಗತಿಕ ಕಚ್ಚಾ ಬೇಡಿಕೆಯು ದಿನಕ್ಕೆ 99 ಮಿಲಿಯನ್ ಬ್ಯಾರೆಲ್‌ಗಳನ್ನು ದಾಟಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಅಂದಾಜಿಸಿದೆ. ಶೀಘ್ರದಲ್ಲೇ ಇದು ದಿನಕ್ಕೆ 100 ಮಿಲಿಯನ್ ಬ್ಯಾರೆಲ್‌ಗಳ ಪೂರ್ವ ಕೋವಿಡ್ ಮಟ್ಟವನ್ನು ದಾಟಬಹುದು. ಇದಕ್ಕೆ ಕಾರಣ ಏಷ್ಯಾದ ಬಹುತೇಕ ದೇಶಗಳು ಕೊರೊನಾ(Corona) ಡೆಲ್ಟಾ ರೂಪಾಂತರದಿಂದ ಚೇತರಿಸಿಕೊಳ್ಳುತ್ತಿವೆ.

ಇದನ್ನೂ ಓದಿ : Job alert! ಒಂದು ಲಕ್ಷಕ್ಕೂ ಅಧಿಕ ಜನರನ್ನು ಕೆಲಸಕ್ಕೆ ನೇಮಕ ಮಾಡಲು ಮುಂದಾದ ಈ ಕಂಪನಿಗಳು..!

ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ(Petrol-Diesel Price Hike) ಪ್ರಕ್ರಿಯೆ ಮುಂದುವರೆದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಅಕ್ಟೋಬರ್ 27 ಬುಧವಾರದಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 35-35 ಪೈಸೆಗಳಷ್ಟು ಹೆಚ್ಚಿಸಿವೆ. ಈ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.94 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 96.67 ರೂ ತಲುಪಿದೆ. ಅದೇ ಸಮಯದಲ್ಲಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 113.45 ರೂ ಮತ್ತು ಡೀಸೆಲ್ ಲೀಟರ್‌ಗೆ 104.75 ರೂ.ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News