ಬೆಂಗಳೂರು : ಜನರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈ ಯೋಜನೆಗಳ ಮೂಲಕ ಜನರ ಹಿತರಕ್ಷಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಗಳ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಜನರ ಅಗತ್ಯಗಳನ್ನು ಪೂರೈಸಲು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ ಜಾರಿಗೊಳಿಸಲಾಗಿದೆ. ಈ ಕಾರ್ಡ್ ಆರ್ಥಿಕವಾಗಿ ಹಿಂದುಳಿದವರಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಇದು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ರೇಷನ್ ಕಾರ್ಡ್ ಅಂದ ಕೂಡಲೇ ಉಚಿತ ಪಡಿತರ ಮಾತ್ರ ಅದರಲ್ಲಿ ಸಿಗುವುದು ಎಂದು ತಿಳಿದುಕೊಂಡಿರುವವರೇ ಹೆಚ್ಚು. ಆದರೆ ಬಿಪಿಎಲ್ ಕಾರ್ಡ್ನಿಂದ ಪಡಿತರ ಮಾತ್ರವಲ್ಲ ಬಡವರಿಗೆ ಇನ್ನೂ ಹಲವು ಪ್ರಯೋಜನಗಳನ್ನು ನೀಡಲಾಗುವುದು.
ಸಬ್ಸಿಡಿ ಪಡಿತರ :
BPL ಕಾರ್ಡ್ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹೆಚ್ಚಿನ ಸಬ್ಸಿಡಿ ದರದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಸಲು ಕಾರ್ಡುದಾರರಿಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಜನರು ತಮ್ಮ ಮತ್ತು ಕುಟುಂಬಗಳಿಗೆ ಮೂಲಭೂತ ಪೋಷಣೆಯನ್ನು ಒದಗಿಸುವುದು ಸಾಧ್ಯವಾಗುತ್ತದೆ. ಅನೇಕ ರಾಜ್ಯಗಳು ಈ ಕಾರ್ಡ್ ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತವೆ.
ಇದನ್ನೂ ಓದಿ : ಈರುಳ್ಳಿಗೆ ಸಂಬಂಧಿಸಿದಂತೆ ಶ್ರೀಸಾಮಾನ್ಯರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವೆ
ವೈದ್ಯಕೀಯ ಸೌಲಭ್ಯಗಳು :
BPL ಕಾರ್ಡುದಾರರು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತ ಅಥವಾ ಹೆಚ್ಚು ಸಹಾಯಧನದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಇದು ಔಷಧಿಗಳು, ರೋಗನಿರ್ಣಯ ಪರೀಕ್ಷೆಗಳು ಮತ್ತು ಆಸ್ಪತ್ರೆಗೆ ಅಡ್ಮಿಟ್ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಬಡವರ ಮೇಲಿನ ಆರೋಗ್ಯ ವೆಚ್ಚದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಶಿಕ್ಷಣ ನೆರವು :
BPL ಕಾರ್ಡುದಾರರು ಸಾಮಾನ್ಯವಾಗಿ ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಸಂಪನ್ಮೂಲಗಳಿಗೆ ಅರ್ಹರಾಗಿರುತ್ತಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ಈ ಮೂಲಕ ಸಾಧ್ಯವಾಗುತ್ತದೆ. ಜ್ಞಾನ ಮತ್ತು ಕೌಶಲ್ಯ ಸಂಪಾದನೆಯ ಮೂಲಕ ಬಡತನದ ಚಕ್ರವನ್ನು ಮುರಿಯಬಹುದು ಎನ್ನುವುದು ಈ ನೆರವಿನ ಹಿಂದಿನ ಉದ್ದೇಶ.
ಇದನ್ನೂ ಓದಿ : "ಸಾಕುಪ್ರಾಣಿಗಳ ಆರೈಕೆ ಮಾರುಕಟ್ಟೆ ಬೆಳವಣಿಗೆಗೆ ಒತ್ತು"-ಸಚಿವ ಎಂ.ಬಿ.ಪಾಟೀಲ್
ವಸತಿ ಮತ್ತು ವಿದ್ಯುತ್ ಪ್ರಯೋಜನಗಳು :
BPL ಕಾರ್ಡುದಾರರು ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ತಮ್ಮ ಮನೆಗಳ ನಿರ್ಮಾಣ ಅಥವಾ ಸುಧಾರಣೆಗೆ ಹಣಕಾಸಿನ ನೆರವು ಪಡೆಯಬಹುದು. ಹೆಚ್ಚುವರಿಯಾಗಿ ಅವರು ಸಬ್ಸಿಡಿ ವಿದ್ಯುತ್ ಸಂಪರ್ಕಕ್ಕೆ ಅರ್ಹರಾಗಿರುತ್ತಾರೆ. ಹೆಚ್ಚು ಸ್ಥಿರ ಮತ್ತು ಆರಾಮದಾಯಕ ಜೀವನ ಪರಿಸರವನ್ನು ಸುರಕ್ಷಿತಗೊಳಿಸಲು ಇದು ಸಹಾಯ ಮಾಡುತ್ತದೆ.
ಸಾಮಾಜಿಕ ಭದ್ರತಾ ಯೋಜನೆಗಳು :
BPL ಕಾರ್ಡುದಾರರು ವೃದ್ಧರು, ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಪಿಂಚಣಿ ಯೋಜನೆಗಳಂತಹ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯುತ್ತಾರೆ. ಈ ಯೋಜನೆಗಳು ಸಮಾಜದ ದುರ್ಬಲ ವರ್ಗಗಳಿಗೆ ನಿಯಮಿತ ಆದಾಯ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತವೆ.
ಇದನ್ನೂ ಓದಿ : Aadhar Card Online Verification: ಸಾರ್ವಜನಿಕರೇ ಎಚ್ಚರ! ಆಧಾರ್ ವಿಷಯದಲ್ಲಿ ಮಿಸ್ ಆಗಿಯೂ ಈ ಕೆಲಸ ಮಾಡಬೇಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.