PM Kisan: ನೀವೂ ಈ ತಪ್ಪು ಮಾಡಿದ್ದರೆ ಖಾತೆ ಸೇರಲ್ಲ ಪಿಎಂ ಕಿಸಾನ್ ಹಣ

PM Kisan Yojana: ಹಲವು ಸಂದರ್ಭದಲ್ಲಿ ನಾವೂ ಎಷ್ಟೇ ಜಾಗರೂಕರಾಗಿದ್ದರೂ ಗೊತ್ತಿಲ್ಲದೆ ಕೆಲವು ತಪ್ಪುಗಳು ಸಂಭವಿಸುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗಲೂ ಹಲವು ಬಾರಿ ತಪ್ಪುಗಳು ಆಗಿರಬಹುದು. ಆದರೆ, ಈ ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದಿನ ಕಂತು ನಿಮ್ಮ ಖಾತೆ ಸೇರದಿರಬಹುದು.   

Written by - Yashaswini V | Last Updated : Jun 13, 2022, 09:31 AM IST
  • 31 ಮೇ 2022 ರಂದು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 11 ನೇ ಕಂತನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.
  • ಆದರೆ ಈ ಹಣ ಹಲವು ರೈತರ ಖಾತೆಗಳಿಗೆ ಇನ್ನೂ ಸೇರಿಲ್ಲ.
  • ಇದಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಮಾಡಿರುವ ಕೆಲವು ತಪ್ಪುಗಳೂ ಕಾರಣವಿರಬಹುದು.
PM Kisan: ನೀವೂ ಈ ತಪ್ಪು ಮಾಡಿದ್ದರೆ ಖಾತೆ ಸೇರಲ್ಲ ಪಿಎಂ ಕಿಸಾನ್ ಹಣ  title=
PM Kisan Nidhi

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಇಂತಹ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ  ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಒಂದು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಧನ ಸಹಾಯ ಮಾಡಲಾಗುತ್ತದೆ. ಈ ಮೊತ್ತವನ್ನು 4 ತಿಂಗಳ ಮಧ್ಯಂತರದಲ್ಲಿ ವರ್ಷಕ್ಕೆ ಮೂರು ಬಾರಿ ನೀಡಲಾಗುತ್ತದೆ. ಆದರೆ, ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಹಲವು ರೈತರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ದೂರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಹಲವು ಸಂದರ್ಭದಲ್ಲಿ ನಾವೂ ಎಷ್ಟೇ ಜಾಗರೂಕರಾಗಿದ್ದರೂ ಗೊತ್ತಿಲ್ಲದೆ ಕೆಲವು ತಪ್ಪುಗಳು ಸಂಭವಿಸುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗಲೂ ಹಲವು ಬಾರಿ ತಪ್ಪುಗಳು ಆಗಿರಬಹುದು. ಆದರೆ, ಈ ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದಿನ ಕಂತು ನಿಮ್ಮ ಖಾತೆ ಸೇರದಿರಬಹುದು.   ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...

ಹಲವು ರೈತರ ಖಾತೆಗೆ ಹಣ ಬರುತ್ತಿಲ್ಲ:
31 ಮೇ 2022 ರಂದು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 11 ನೇ ಕಂತನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಆದರೆ ಈ ಹಣ ಹಲವು ರೈತರ ಖಾತೆಗಳಿಗೆ ಇನ್ನೂ ಸೇರಿಲ್ಲ. ಇದಕ್ಕೆ  ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಮಾಡಿರುವ ಕೆಲವು ತಪ್ಪುಗಳೂ ಕಾರಣವಿರಬಹುದು. ನೀವು ಮಾಡುವ ಯಾವ ರೀತಿಯ ಸರಳ ತಪ್ಪುಗಳು ನಿಮ್ಮ ಹಣವನ್ನು ನಿಲ್ಲಿಸಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ...

ಹೆಸರು ಬರೆಯುವಾಗ ಮಾಡುವ ತಪ್ಪು:
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಹೆಸರನ್ನು ಸರಿಯಾಗಿ ಬರೆಯಬೇಕು. ಹಲವು ಫಲಾನುಭವಿಗಳು ಅರ್ಜಿಯಲ್ಲಿ ತಮ್ಮ ಹೆಸರನ್ನು ತಪ್ಪಾಗಿ ನಮೂದಿಸಿರುವುದು ಕಂಡು ಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಹೆಸರು ಇತರ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ನಿಮ್ಮ ಹಣವು ನಿಲ್ಲುತ್ತದೆ. ಈ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಹೆಸರನ್ನು ಸರಿಪಡಿಸಬೇಕು.

ಇದನ್ನೂ ಓದಿ- Pension : ಕೇಂದ್ರದ ಈ ಯೋಜನೆ ಮೂಲಕ, ಕಾರ್ಮಿಕರಿಗೆ ಸಿಗಲಿದೆ ತಿಂಗಳಿಗೆ ₹3000 ಪಿಂಚಣಿ!

ಅರ್ಜಿದಾರರ ತಪ್ಪು ವಿಳಾಸ:
ಅರ್ಜಿ ಸಲ್ಲಿಸುವಾಗ ತಪ್ಪು ವಿಳಾಸ ನಮೂದಿಸಿದರೂ ಕಂತಿನ ಹಣವನ್ನು ನಿಲ್ಲಿಸಬಹುದು. ಅನೇಕ ಸಂದರ್ಭಗಳಲ್ಲಿ ಅರ್ಜಿದಾರನು ಅವನ/ಅವಳ ವಿಳಾಸವನ್ನು ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಕಂತು ಪಡೆಯಲು ನೀವು ತೊಂದರೆಯನ್ನು ಎದುರಿಸಬಹುದು. ಈ ಪರಿಸ್ಥಿತಿಯಲ್ಲಿ, ನೀವು ತಕ್ಷಣ ನಿಮ್ಮ ಪಿಎಂ ಕಿಸಾನ್ ಖಾತೆಯಲ್ಲಿ ವಿಳಾಸವನ್ನು ಸರಿಪಡಿಸಿ.

ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸುವುದು:
ನೀವು ತರಾತುರಿಯಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೂ ಸಹ, ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣವು ಸಿಲುಕಿಕೊಳ್ಳಬಹುದು. ಆದ್ದರಿಂದ ನೀವು ಆಧಾರ್‌ಗೆ ಸಂಬಂಧಿಸಿದ ವಿವರಗಳನ್ನು ಸರಿಯಾಗಿ ನಮೂದಿಸುವುದು ಮುಖ್ಯವಾಗಿದೆ. ಒಮ್ಮೆ ಆಧಾರ್ ಸಂಖ್ಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ.

ಮಾತೃ ಭಾಷೆಯಲ್ಲಿ ಹೆಸರನ್ನು ಬರೆದಿದ್ದರೆ ಅದನ್ನು ಆಂಗ್ಲ ಭಾಷೆಯಲ್ಲಿ ಬರೆಸಿ: 
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೀವು ಹಿಂದಿಯಲ್ಲಿ ಅಥವಾ ನಿಮ್ಮ ಮಾತೃ ಭಾಷೆಯಲ್ಲಿ ಬರೆದಿದ್ದರೂ, ಕಂತುಗಳ ಪ್ರಯೋಜನವನ್ನು ಪಡೆಯುವಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ನೀವು ಯಾವಾಗಲೂ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕು. ನಿಮ್ಮ ಹೆಸರನ್ನು ನೀವು ನಿಮ್ಮ ಮಾತೃ ಭಾಷೆಯಲ್ಲಿ ಬರೆದಿದ್ದರೆ, ತಕ್ಷಣ ಅದರ ಪಕ್ಕದಲ್ಲಿ ನಿಮ್ಮ ಹೆಸರನ್ನು ಇಂಗ್ಲಿಷ್‌ನಲ್ಲಿಯೂ ಬರೆಸಿ ಸಲ್ಲಿಸಿ. 

ಇದನ್ನೂ ಓದಿ- Ration Card: ಗುಡ್ ನ್ಯೂಸ್! ಬದಲಾಗಲಿದೆ ಪಡಿತರ ವಿತರಣೆ ನಿಯಮ!

ಅಪೂರ್ಣ ಇ-ಕೆವೈಸಿ:
ಪಿಎಂ ಕಿಸಾನ್ ನಿಧಿಗಾಗಿ ನಿಮ್ಮ ಇ-ಕೆವೈಸಿಯನ್ನು ಮಾಡಲು ನಿಮಗೆ ಇನ್ನೂ ಸಾಧ್ಯವಾಗದಿದ್ದರೆ, ಈಗಲೇ ಇದನ್ನು ಮಾಡಿ. ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯ. ಈ ಹಿಂದೆ ಇ-ಕೆವೈಸಿಗೆ ಮೇ 31 ಕೊನೆಯ ದಿನಾಂಕವಾಗಿತ್ತು, ಇದನ್ನು ಈಗ ಸರ್ಕಾರವು ಜುಲೈ 31 ರವರೆಗೆ ವಿಸ್ತರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News