Home Loan ಮೇಲೆ ಭಾರಿ ರಿಯಾಯಿತಿ, ಹೋಳಿ ಹಬ್ಬಕ್ಕೂ ಮುನ್ನ ಬಡ್ಡಿದರದಲ್ಲಿ ಭಾರಿ ಇಳಿಕೆ ಮಾಡಿದೆ ಈ ಸರ್ಕಾರಿ ಬ್ಯಾಂಕ್!

Home Loan Interest Rate: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ  ಬ್ಯಾಂಕ್ ಆಫ್ ಇಂಡಿಯಾ (BOI) ಮಂಗಳವಾರ ತನ್ನ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ (bank of india home loan interest rate 2024). ಹೌದು, ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.15 ರಷ್ಟು ಕಡಿತ ಮಾಡಿ  ಶೇ. 8.45 ರಿಂದ 8.3 ಕ್ಕೆ ಇಳಿಸುವುದಾಗಿ ಬ್ಯಾಂಕ್ ಘೋಷಿಸಿದೆ (Business News In Kannada).  

Written by - Nitin Tabib | Last Updated : Mar 19, 2024, 08:46 PM IST
  • ಬ್ಯಾಂಕ್ ಮೇಲ್ಛಾವಣಿ ಸೌರ ಸ್ಥಾವರಗಳಿಗೆ ಶೇ. 7ರ ಬಡ್ಡಿದರದಲ್ಲಿ ವಿಶೇಷ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ.
  • ಇದರಲ್ಲೂ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ.
  • ಬಡ್ಡಿದರ ಕಡಿತದ ನಂತರ, 30 ವರ್ಷಗಳ ಗೃಹ ಸಾಲದ ಮಾಸಿಕ ಕಂತು (ಇಎಂಐ) ತಿಂಗಳಿಗೆ ರೂ 755 ಆಗಿರಲಿದೆ ಎಂದು ಬ್ಯಾಂಕ್ ಹೇಳಿದೆ.
Home Loan ಮೇಲೆ ಭಾರಿ ರಿಯಾಯಿತಿ, ಹೋಳಿ ಹಬ್ಬಕ್ಕೂ ಮುನ್ನ ಬಡ್ಡಿದರದಲ್ಲಿ ಭಾರಿ ಇಳಿಕೆ ಮಾಡಿದೆ ಈ ಸರ್ಕಾರಿ ಬ್ಯಾಂಕ್! title=

BOI Holi 2024 Offer: ಹೋಳಿ ಹಬ್ಬದ (Holi 2024) ಸಂದರ್ಭದಲ್ಲಿ ನೀವೂ ಕೂಡ ನಿಮ್ಮ ಸ್ವಂತ ಮನೆ ಕನಸನ್ನು ನನಸಾಗಿಸಲು ಬಯಸುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ,  ನೀವು ಈಗ ಸರ್ಕಾರಿ ಬ್ಯಾಂಕ್‌ಗಳಿಂದ ಅಗ್ಗದ ಸಾಲದ ಕೊಡುಗೆಗಳ ಲಾಭವನ್ನು ಪಡೆಯಬಹುದು. ಹೌದು ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ (BOI) ಮಂಗಳವಾರ ಹೊಸ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಶೇಕಡಾ 0.15 ರಷ್ಟು ಇಳಿಕೆ ಮಾಡಿ ಅದನ್ನು ಶೇ. 8.45 ರಿಂದ ಶೇ. 8.3 ಕ್ಕೆ ಇಳಿಸುವುದಾಗಿ ಘೋಷಿಸಿದೆ(bank of india home loan interest rate 2024). ಈ ಸೀಮಿತ ಅವಧಿಯ ಯೋಜನೆಯು ಈ ತಿಂಗಳ ಅಂತ್ಯದವರೆಗೆ ಅಂದರೆ ಮಾರ್ಚ್ 31 ರವರೆಗೆ ಜಾರಿಯಲ್ಲಿರಲಿದೆ ಎಂದು ಬ್ಯಾಂಕ್ ಹೇಳಿದೆ. ಇದರಲ್ಲಿ ಯಾವುದೇ ರೀತಿಯ ಪ್ರೋಸೆಸಿಂಗ್ ಶುಲ್ಕ ಇರುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. (Business News In Kannada)

ಇದನ್ನೂ ಓದಿ-Infosys: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ

ತನ್ನ ಗೃಹ ಸಾಲವೇ ಅಗ್ಗದ ಸಾಲ ಎಂದ ಬ್ಯಾಂಕ್
ಬ್ಯಾಂಕ್ ಇಳಿಕೆ ಮಾಡಿರುವ ಶೇ. 8.3 ರಷ್ಟು ಬಡ್ಡಿದರವು ತನ್ನ ಪ್ರತಿಸ್ಪರ್ಧಿಗಳ ದೃಷ್ಟಿಯಿಂದ ಈ ವರ್ಗದಲ್ಲಿ ಕಡಿಮೆ ಬಡ್ಡಿ ದರವಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಂತಹ ಪ್ರಮುಖ ಬ್ಯಾಂಕ್‌ಗಳಲ್ಲಿ ಕನಿಷ್ಠ ದರವು ಶೇಕಡಾ 8.4 ರಷ್ಟಿದೆ ಎಂದು ಬ್ಯಾಂಕ್ ಹೇಳಿದೆ. ಈ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಸೀಮಿತವಾಗಿದೆ .

ಇದನ್ನೂ ಓದಿ-Zomato Feature: ಶಾಕಾಹಾರಿಗಳಿಗೊಂದು ಸಂತಸದ ಸುದ್ದಿ ಪ್ರಕಟಿಸಿದ Zomato, ಬಿಡುಗಡೆಯಾಗಿದೆ ಹೊಸ ವೈಶಿಷ್ಟ್ಯ!

ಸೌರ ಪ್ಯಾನೆಲ್ ಮೇಲೂ ಕೊಡುಗೆ
ಬ್ಯಾಂಕ್ ಮೇಲ್ಛಾವಣಿ ಸೌರ ಸ್ಥಾವರಗಳಿಗೆ ಶೇ. 7ರ  ಬಡ್ಡಿದರದಲ್ಲಿ ವಿಶೇಷ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ. ಇದರಲ್ಲೂ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ. ಬಡ್ಡಿದರ ಕಡಿತದ ನಂತರ, 30 ವರ್ಷಗಳ ಗೃಹ ಸಾಲದ ಮಾಸಿಕ ಕಂತು (ಇಎಂಐ) ತಿಂಗಳಿಗೆ ರೂ 755 ಆಗಿರಲಿದೆ ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News